ಕಾಸರಗೋಡು : ಬಾಲಭವನ ಆಂಗ್ಲ ಮಾಧ್ಯಮ ಶಾಲೆಯ 'ಮಯವಿಲ್ ದಿ ಕೆ. ಜಿ. ಫೆಸ್ಟ್' ಕಾರ್ಯಕ್ರಮವನ್ನು ಶಾಲಾ ಮುಖ್ಯೋಪಾಧ್ಯಾಯಿನಿ ಲೀಲಾವತಿ ನಾಯರ್ ದೀಪ ಬೆಳಗಿಸಿ ಉದ್ಘಾಟಿಸಿದರು.
ವೇದಿಕೆಯಲ್ಲಿ ಪಿ.ಟಿ.ಎ. ಅಧ್ಯಕ್ಷ ಮುಹಮ್ಮದ್ ಅಸ್ಲಾಂ, ಉಪಾಧ್ಯಕ್ಷೆ ಶೀಬಾ, ಕೋಶಾಧಿಕಾರಿ ಪೌಲೋಸ್, ಶಾಲಾ ಅಕಾಡೆಮಿಕ್ ಸಲಹೆಗಾರ ಡಾl ಕೆ.ಎನ್. ವೆಂಕಟ್ರಮಣ ಹೊಳ್ಳ, ಸುದೀಪ ಟೀಚರ್, ಸುಶ್ಮಿತ ಟೀಚರ್ ಶಾಲಾ ಅಧ್ಯಾಪಿಕೆಯರು ಹಾಗೂ ಪಿ.ಟಿ.ಎ. ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಶಾಲಾ ಮಕ್ಕಳು ಪ್ರಾರ್ಥನೆ ಹಾಡಿ, ಪವಿಳ ಟೀಚರ್ ಸ್ವಾಗತಿಸಿ, ಶಾಲಾ ಜತೆ ಕಾರ್ಯದರ್ಶಿ ದೀಪ್ತಿ ಟೀಚರ್ ವಂದಿಸಿದರು.

0 Comments