ಬದಿಯಡ್ಕ : ಬ್ರಾಹ್ಮಣ ಪರಿಷತ್ ಕಾಸರಗೋಡು ಇದರ ವಾರ್ಷಿಕ ಮಹಾಸಭೆಯು ನವಂಬರ್ 8ರಂದು ಭಾನುವಾರ ಶ್ರೀ ಎಡನೀರು ಮಠದಲ್ಲಿ ಜರಗಲಿರುವುದು. ಇದರ ಆಮಂತ್ರಣ ಪತ್ರಿಕೆಯನ್ನು ಪರಮಪೂಜ್ಯ ಶ್ರೀ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿಯವರು ಬಿಡುಗಡೆಗೊಳಿಸಿ ಆಶೀರ್ವದಿಸಿದರು.
2001ರಲ್ಲಿ ಕಾಸರಗೋಡು ಜಿಲ್ಲೆಯ ಸುಮಾರು ಏಳು ಬ್ರಾಹ್ಮಣ ಸಂಘಟನೆಗಳಾದ ಹವ್ಯಕ, ಶಿವಳ್ಳಿ, ಕರ್ಹಾಡ, ಯೋಗಕ್ಷೇಮ, ಕೂಟ ಮಹಾಜಗತ್ತು, ಶಿವ (ಸ್ಥಾನಿಕ) ಬ್ರಾಹ್ಮಣ, ಕೇರಳ ಬ್ರಾಹ್ಮಣ (ಅಯ್ಯರ್ ಸಭಾ) ಇತ್ಯಾದಿ ಸಂಘಗಳ ಸದಸ್ಯರಿಂದ ಬ್ರಾಹ್ಮಣ ಒಕ್ಕೂಟ ರೂಪುಗೊಂಡಿದೆ. ನ.8ರಂದು ಬೆಳಗ್ಗೆ 9 ಗಂಟೆಗೆ ನೊಂದಾವಣೆ, ಭಜನೆ, 10 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಶ್ರೀ ಎಡನೀರು ಮಠದ ಪರಮಪೂಜ್ಯ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ದೀಪಪ್ರಜ್ವಲನೆಗೈದು ಉದ್ಘಾಟಿಸಿ ಆಶೀರ್ವಚನ ನೀಡಲಿದ್ದಾರೆ. ಬ್ರಾಹ್ಮಣ ಪರಿಷತ್ನ ಅಧ್ಯಕ್ಷರಾದ ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಅಧ್ಯಕ್ಷತೆಯಲ್ಲಿ ಮುಖ್ಯ ಅತಿಥಿಗಳಾಗಿ ನಿಟ್ಟೆ ಯುನಿವರ್ಸಿಟಿಯ ಉಪಕುಲಪತಿ ಡಾ. ಪ್ರೊ. ಎಂ. ಶಿವರಾಮ ಮೂಡಿತ್ತಾಯ ಪಾಲ್ಗೊಳ್ಳಲಿದ್ದಾರೆ. ಡಾ. ಚೇತನಾ ಸಿ.ಎಸ್. ಅವರಿಗೆ ಡಾ. ಯು.ಬಿ.ಕುಣಿಕುಳ್ಳಾಯ ಸ್ಮಾರಕ ಪ್ರಶಸ್ತಿ, ಕೃಷಿ ಪ್ರಶಸ್ತಿಗಳು, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರಶಸ್ತಿಗಳನ್ನು ಈ ಸಂದರ್ಭದಲ್ಲಿ ನೀಡಲಾಗುವುದು. ಡಾ| ಶಿವಶಂಕರ್ ಮಂಗಳೂರು, ಡಾ| ಕಾಟಿಪಳ್ಳ ಸುಬ್ರಹ್ಮಣ್ಯ ಭಟ್ ಬೆಂಗಳೂರು, ಡಾ| ಕೃಷ್ಣ ಕುಮಾರಿ ಕಾಞಂಗಾಡು, ಡಾ| ಸತ್ಯನಾಥ ಕಳನಾಡು ಶುಭಾಶಂಸನೆಗೈಯಲಿದ್ದಾರೆ. ಲೆಕ್ಕ ಪರಿಶೋಧಕ ಎಚ್.ಎಸ್. ಭಟ್ ಕಾಞಂಗಾಡು ಅವರು ಸಮನ್ವಯ ಎಜ್ಯುಕೇಶನಲ್ ಏಂಡ್ ಚಾರಿಟೇಬಲ್ ಟ್ರಸ್ಟ್ನ ಬಗ್ಗೆ ವಿವರಣೆ ನೀಡಲಿದ್ದಾರೆ. ಬ್ರಾಹ್ಮಣ ಪರಿಷತ್ನ ಪ್ರಧಾನ ಕಾರ್ಯದರ್ಶಿ ಆರ್. ಸೂರ್ಯನಾರಾಯಣ ಭಟ್, ಆದ್ಯ ಗುರುಪ್ರಸಾದ್, ಬ್ರಾಹ್ಮಣ ಪರಿಷತ್ನ ಕೋಶಾಧಿಕಾರಿ ಟಿ. ಗೋವಿಂದನ್ ನಂಬೂದಿರಿ, ರಾಜೇಂದ್ರ ಬಜಕೂಡ್ಲು, ಪ್ರೊ. ಶ್ರೀನಾಥ ಉಪಾಧ್ಯಾಯ, ಸತೀಶ ಪುಣಿಂಚತ್ತಾಯ ಹಾಗೂ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಮಧ್ಯಾಹ್ನ ಭೋಜನದ ನಂತರ 4 ಗಂಟೆಯ ತನಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿವೆ.

0 Comments