ಕೊಡ್ಲಮೊಗರು : ವರ್ಕಾಡಿ ಪಂಚಾಯತ್ ಮಟ್ಟದ ಬಾಲವೇದಿ ಮಕ್ಕಳ ಸೃಜನೋತ್ಸವ ಕಾರ್ಯಕ್ರಮವು ಹೈಯರ್ ಸೆಕಂಡರಿ ಶಾಲೆ ಕೊಡ್ಲಮೊಗರುನಲ್ಲಿ ಜರಗಿತು. ವರ್ಕಾಡಿ ಪಂಚಾಯತ್ ವ್ಯಾಪ್ತಿಯ ವಿವಿಧ ಗ್ರಂಥಾಲಯಗಳ ಬಾಲವೇದಿಯ ಸುಮಾರು 75 ಕ್ಕಿಂತಲೂ ಅಧಿಕ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗನ್ನು ತಂದರು.
ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ವರ್ಕಾಡಿ ಗ್ರಾಮ ಪಂಚಾಯತ್ ಸದಸ್ಯೆ ಗೀತಾ ವಿ ಸಾಮಾನಿ ಪ್ರಮಾಣ ಪತ್ರ ವಿತರಿಸಿದರು. ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ಸದಸ್ಯರಾದ ಕಿಶೋರ್ ಪಾವಳರವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಪುಷ್ಪ ಟೀಚರ್ ಕತ್ತೆರಿಕೋಡಿ, ರೇಖಾ ಟೀಚರ್, ಶ್ವೇತಾ ಟೀಚರ್, ಲೋಕೇಶ್ ಪಾವಳ, ಜನನಿ, ಝೌರ, ಶ್ವೇತಾ, ಅಶ್ವಿನಿ, ಜಯಶ್ರೀ ಮೊದಲಾದವರು ಉಪಸ್ಥಿತರಿದ್ದರು. ವರ್ಕಾಡಿ ಪಂಚಾಯತ್ ಸಮಿತಿ ಸಂಚಾಲಕರಾದ ವಿಜಯ ಕುಮಾರ್ ಪಾವಳ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಅಶೋಕ್ ಕೊಡ್ಲಮೊಗರು ವಂದಿಸಿದರು.

0 Comments