ಕಾಸರಗೋಡು : ಎಂಡೋಸಲ್ಫಾನ್ ದುರಂತದ ಸಂಕಷ್ಟಗಳು, ಅದರ ವಿರುದ್ಧ ನಡೆದ ಹೋರಾಟಗಳು ಹಾಗೂ ಸಾಮಾಜಿಕ ಹಸ್ತಕ್ಷೇಪಗಳನ್ನು ದಾಖಲಿಸುವ ಬಿ. ಅಶ್ರಫ್ ಅವರ ‘ವಿಷಮಳ’ ಮಲೆಯಾಳ ಪುಸ್ತಕದ ಮುಖಪುಟವನ್ನು ಲೀಲಾಕುಮಾರಿ ಅಮ್ಮ ಬಿಡುಗಡೆ ಮಾಡಿದರು.
ಎಂಡೋಸಲ್ಫಾನ್ ದುರಂತದ ವಿರುದ್ಧದ ಕಾನೂನು ಹೋರಾಟಗಳಿಂದ ಗಮನ ಸೆಳೆದಿರುವ ಲೀಲಾಕುಮಾರಿ ಅಮ್ಮ ಅವರ ನಿವಾಸದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಳಿಯಾರ್ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ಬಿ. ಮೊಹಮ್ಮದ್ ಕುಂಞಿ ಅಧ್ಯಕ್ಷತೆ ವಹಿಸಿದರು.
ಕಾರ್ಯಕ್ರಮದಲ್ಲಿ ಡಾ. ಮೊಯ್ದೀನ್ ಜಾಸಿರಲಿ, ವಿ. ಅಬ್ದುಲ್ ಸಲಾಂ, ಅಡ್ವ. ರಾಜೇಂದ್ರನ್, ಕುಮಾರನ್ ಬಿ.ಸಿ., ಮಸೂದ್ ಬೋವಿಕ್ಕಾನ, ಶರೀಫ್ ಕೊಡವಂಚಿ, ಮೋಹನನ್ ನಾರಂತಟ್ಟ, ಕೊಟ್ಟನ್ ಪೆರಿಯ, ಅಬ್ದುಲ್ ಖಾದರ್ ಚಟ್ಟಂಚಾಲ್, ಹಮೀದ್ ಕಾವಿಲ್, ನಾಸರ್ ಚೆರ್ಕಳ, ಸುಕುಮಾರನ್ ಮಾಸ್ಟರ್, ಹುಸೈನ್ ನವಾಸ್, ಸಿದ್ದೀಕ್ ಬೋವಿಕ್ಕಾನ, ಬಿ. ಅಬ್ದುಲ್ ಗಫೂರ್, ಲೇಖಕಿ ಶೆರಿನ್ ಬೋವಿಕ್ಕಾನ, ವೈ. ಮೊಯ್ದೀನ್ ಕುಂಞಿ, ಬಿ.ಕೆ. ಶಾಫಿ, ಅಶ್ರಫ್ ದಾವೂದಿಯಾ, ಬಿ. ಮೊಹಮ್ಮದ್ ಅಶ್ರಫ್ ಹಾಗೂ ಶಂಸುದ್ದೀನ್ ಕುವೈಟ್ ಮಾತನಾಡಿದರು. ಬಿ. ಅಶ್ರಫ್ ವಂದಿಸಿದರು.
ಕೇರಳ ರಾಜ್ಯೋದಯ ದಿನದಂದು ಪುಸ್ತಕವನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಗುವುದು ಎಂದು ಪುಂಚಿರಿ ಮುಳಿಯಾರ್ ಪದಾಧಿಕಾರಿಗಳು ತಿಳಿಸಿದ್ದಾರೆ.

0 Comments