ಆಲುವಾ : ನಿಲುಗಡೆಯಿಲ್ಲದ ನಿಲ್ದಾಣದಲ್ಲಿ ರೈಲಿನ ವೇಗ ಕಡಿಮೆಯಾದಾಗ ಕೆಳಗಿಳಿಯಲು ಪ್ರಯತ್ನಿಸಿದ ಯುವಕರೋರ್ವರು ಮೃತಪಟ್ಟಿದ್ದಾರೆ. ಪೂಞ್ಞಾಶ್ಶೇರಿಯ ಅಮ್ಮಚ್ಚಿಕವಲ ನಿವಾಸಿ ಅಲ್ತಾಫ್ (35) ಮೃತರು.
ಮಂಗಳವಾರ ಮುಂಜಾನೆ ಚೆನ್ನೈ–ತಿರುವನಂತಪುರ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಅಲ್ತಾಫ್, ಆಲುವಾ ರೈಲು ನಿಲ್ದಾಣದಲ್ಲಿ ರೈಲಿನಿಂದ ಇಳಿಯಲು ಯತ್ನಿಸಿದ್ದಾರೆ. ಈ ವೇಳೆ ಪ್ಲಾಟ್‌ಫಾರ್ಮ್‌ಗೆ ತಲೆ ಬಡಿದು ಬಿದ್ದು ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹವನ್ನು ಆಸ್ಪತ್ರೆಗೆ ಕೊಂಡೊಯ್ದು ಶವಾಗಾರಕ್ಕೆ ಸ್ಥಳಾಂತರಿಸಿದ್ದಾರೆ. ದೀರ್ಘಕಾಲ ವಿದೇಶದಲ್ಲಿ ಉದ್ಯೋಗದಲ್ಲಿದ್ದ ಅಲ್ತಾಫ್ ಬಳಿಕ ಊರಿಗೆ ಮರಳಿ ಉಬರ್ ಟ್ಯಾಕ್ಸಿ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಮೃತರಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ.

0 Comments