Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಜಿಲ್ಲೆಯ ಎರಡು ಕಡೆ ಭರ್ಜರಿ ಮಾದಕವಸ್ತು ಬೇಟೆ: ಎಂಡಿಎಂಎ ಜೊತೆ ಇಬ್ಬರ ಬಂಧನ


ಕಾಸರಗೋಡು: ಜಿಲ್ಲೆಯ ಚಂದೇರ ಮತ್ತು ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ನಿಷೇಧಿತ ಮಾದಕವಸ್ತು ಎಂಡಿಎಂಎ ಜೊತೆ ಇಬ್ಬರನ್ನು ಬಂಧಿಸಲಾಗಿದೆ. ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು 6.28 ಗ್ರಾಂ ಎಂಡಿಎಂಎಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬಂಧಿತರನ್ನು ಚೆರುವತ್ತೂರು  ನಿವಾಸಿ ಅನಸ್ ಎ.ಕೆ (41) ಹಾಗೂ ಮಧೂರು ಪಟ್ಲ ನಿವಾಸಿ ಹೈದರ್ ಮಧೂರು ಮೊಹಮ್ಮದ್ (41) ಎಂದು ಗುರುತಿಸಲಾಗಿದೆ.

ಶುಕ್ರವಾರ ಸಂಜೆ ಸುಮಾರು 6.30ರ ವೇಳೆಗೆ ವಿದ್ಯಾನಗರ ಸಬ್ ಇನ್‌ಸ್ಪೆಕ್ಟರ್ ವಿಷ್ಣು ಎಲ್. ಅವರ ನೇತೃತ್ವದ ಪೊಲೀಸ್ ತಂಡ ಗಸ್ತು ತಿರುಗುತ್ತಿದ್ದಾಗ ಮಧೂರು ಜುಮಾ ಮಸೀದಿ ಸಮೀಪದ ಮನೆಯೊಂದರ ಮುಂಭಾಗದಲ್ಲಿ ಹೈದರ್ ಮಧೂರು ಮೊಹಮ್ಮದ್ (41) ಎಂಬಾತನನ್ನು ಬಂಧಿಸಿದೆ.

ಪೊಲೀಸ್ ವಾಹನವನ್ನು ಕಂಡು ಗಾಬರಿಗೊಂಡು ಅಲ್ಲಿಂದ ತೆರಳಲು ಯತ್ನಿಸಿದ ಆತನನ್ನು ತಡೆದು ಪರಿಶೀಲಿಸಿದಾಗ, ಪ್ಯಾಂಟ್ ಜೇಬಿನಲ್ಲಿದ್ದ ಜಿಪ್‌ಲಾಕ್ ಕವರ್‌ನಲ್ಲಿ 3.61 ಗ್ರಾಂ ಎಂಡಿಎಂಎ ಪತ್ತೆಯಾಗಿದೆ. ಸುಮಾರು 15,000 ರೂಪಾಯಿ ಮೌಲ್ಯದ ಮಾದಕವಸ್ತು ಹಾಗೂ ಆರೋಪಿಯ ಮೊಬೈಲ್ ಫೋನ್‌ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಸಂಬಂಧ ವಿದ್ಯಾನಗರ ಪೊಲೀಸರು  ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ, ಖಚಿತ ಮಾಹಿತಿ ಮೇರೆಗೆ ಚಂದೇರ ಸಬ್ ಇನ್‌ಸ್ಪೆಕ್ಟರ್ ವಿಷ್ಣು ಎಸ್. ನಾಯರ್ ಅವರ ನೇತೃತ್ವದ ಪೊಲೀಸ್ ತಂಡ ನವೆಂಬರ್ 13ರ ಶುಕ್ರವಾರ ಸಂಜೆ ದೊಡ್ಡಪರಂಬು ಪಡನ್ನಕ್ಕಡಪ್ಪುರಂನಲ್ಲಿ ತಪಾಸಣೆ ನಡೆಸಿತು.

ಈ ವೇಳೆ ಕಾರಿನಲ್ಲಿ ಕುಳಿತಿದ್ದ ಚೆರುವತ್ತೂರು ಓರಿಮುಕ್ಕಿನ ರುಖಿಯಾ ಮಂಜಿಲ್ ನಿವಾಸಿ ಅನಸ್ ಎ.ಕೆ (41) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ಪರಿಶೀಲಿಸಿದರು.

ನೀಲೇಶ್ವರಂ ಸರ್ಕಲ್ ಇನ್‌ಸ್ಪೆಕ್ಟರ್ ಪ್ರಶಾಂತ್ ಕೆ. ಅವರ ಸಮ್ಮುಖದಲ್ಲಿ ನಡೆಸಿದ ತಪಾಸಣೆಯಲ್ಲಿ, ಆರೋಪಿ ಧರಿಸಿದ್ದ ಜೀನ್ಸ್ ಪ್ಯಾಂಟ್‌ನ ಜೇಬಿನಲ್ಲಿದ್ದ ಸಿಗರೇಟ್ ಪ್ಯಾಕೆಟ್‌ನಲ್ಲಿ ಅಡಗಿಸಿಟ್ಟಿದ್ದ 2.670 ಗ್ರಾಂ ಎಂಡಿಎಂಎ ಪತ್ತೆಯಾಗಿದೆ.

ಮಾದಕವಸ್ತು ಸಾಗಾಟಕ್ಕೆ ಬಳಸಿದ್ದ ಕಾರು ಹಾಗೂ ಒಂದು ಮೊಬೈಲ್ ಫೋನ್‌ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಪ್ರಕರಣದಲ್ಲಿ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಜಿಲ್ಲೆಯಲ್ಲಿ ಮಾದಕವಸ್ತುಗಳ ವಿರುದ್ಧ ಪೊಲೀಸರು ನಡೆಸುತ್ತಿರುವ ಕಾರ್ಯಾಚರಣೆಯ ಭಾಗವಾಗಿ ಈ ಎರಡು ಬಂಧನಗಳು ನಡೆದಿವೆ.

Post a Comment

0 Comments

ಜಾಹೀರಾತು

Responsive Advertisement