Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಗೋಳಿಯಡ್ಕದಲ್ಲಿ ಕೋಳಿ ಅಂಕ ನಿರತರಾಗಿದ್ದ ಆರು ಮಂದಿ ಬಂಧನ; ಐದು ಹುಂಜಗಳು ವಶಕ್ಕೆ

ಬದಿಯಡ್ಕ: ಹಣವನ್ನು ಪಣಕ್ಕಿಟ್ಟು ಕೋಳಿ ಅಂಕದಲ್ಲಿ ನಿರತರಾಗಿದ್ದ ಆರು ಮಂದಿಯನ್ನು ಐದು ಹುಂಜಗಳ ಸಹಿತ ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ.

ಕಾಸರಗೋಡು ಕರಂದಕ್ಕಾಡಿನ ದಿನೇಶ್ (28), ಗೋಳಿಯಡ್ಕ ಮಕ್ಕಿಕಾನೆಯ ಈಶ್ವರ (26), ಬದಿಯಡ್ಕ ಮುಂಚಿತ್ತಡ್ಕದ ಬಾಲಕೃಷ್ಣ ರೈ (46), ಗೋಳಿಯಡ್ಕ ಕೊಡಿಯಡ್ಕದ ಸೌರವ್ ರೈ (42), ಕೂಡ್ಲುವಿನ ಜಯಾನಂದನ್ (48) ಹಾಗೂ ಪಡಿಯತ್ತಡ್ಕದ ಅಶೋಕ (55) ಬಂಧಿತರು.

ನಿನ್ನೆ ಮಧ್ಯಾಹ್ನ 2.30ರ ಸುಮಾರಿಗೆ ಬದಿಯಡ್ಕ ಪೊಲೀಸ್ ಠಾಣಾಧಿಕಾರಿ ಸುನಿಲ್ ಕುಮಾರ್ ಟಿ. ಅವರ ನೇತೃತ್ವದ ಪೊಲೀಸ್ ತಂಡ ಗಸ್ತು ತಿರುಗುತ್ತಿದ್ದಾಗ, ಗೋಳಿಯಡ್ಕ ಮಕ್ಕಿಕಾನೆಯಲ್ಲಿ ಕೋಳಿ ಅಂಕ ನಡೆಯುತ್ತಿರುವ ಬಗ್ಗೆ ರಹಸ್ಯ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ದಾಳಿ ನಡೆಸಿದ ಪೊಲೀಸರು ಆರು ಮಂದಿಯನ್ನು ಐದು ಹುಂಜಗಳ ಸಹಿತ ವಶಕ್ಕೆ ಪಡೆದಿದ್ದಾರೆ.

ಪೊಲೀಸರನ್ನು ಕಂಡು ಗುರುತು ಪತ್ತೆಹಚ್ಚಬಹುದಾದ ಇನ್ನೂ ಏಳು ಮಂದಿ ಸ್ಥಳದಿಂದ ಪರಾರಿಯಾಗಿದ್ದು, ಅವರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ. ಬಂಧಿತರ ವಿರುದ್ಧ ಪ್ರಕರಣ ದಾಖಲಿಸಿದ ಬಳಿಕ ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Post a Comment

0 Comments

ಜಾಹೀರಾತು

Responsive Advertisement