ಮಂಜೇಶ್ವರ: ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2023 ರಲ್ಲಿ ದಾಖಲಿಸಿದ ಫೋಕ್ಸೊ ಪ್ರಕರಣದಲ್ಲಿ ಹೊಸ ತಿರುವು ಉಂಟಾಗಿದೆ. ಅಂದು ಗರ್ಭಿಣಿಯಾದ ಬಾಲಕಿ ಹಾಗೂ ಆರೋಪಿಯ ಡಿ.ಎನ್.ಎ.ಪರೀಕ್ಷೆ ನಡೆಸಿದಾಗ ಅದು ನೆಗೆಟಿವ್ ಎಂದು ಬಂದಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಬಾಲಕಿಯ ಹೊಸ ಹೇಳಿಕೆಯನ್ನು ತೆಗೆದಿದ್ದು, ಮಂಗಳೂರಿನ ಓರ್ವ ಡಾಕ್ಟರ್ ವಿರುದ್ದ ಕೇಸು ದಾಖಲಿಸಲಾಗಿದೆ.
2023 ರಲ್ಲಿ ಬಾಲಕಿ ಗರ್ಬಿಣಿಯಾದ ಪ್ರಕರಣದಲ್ಲಿ ಪೊಲೀಸರು ಬಾಲಕಿಯ ಹೇಳಿಕೆಯಂತೆ ಓರ್ವನ ವಿರುದ್ದ ಕೇಸು ದಾಖಲಿಸಿದ್ದರು. ಅಲ್ಲದೆ ಬಾಲಕಿ ಹಾಗೂ ಯುವಕನ ರಕ್ತ ಸ್ಯಾಂಪಲ್ಲು ತೆಗೆದು ಡಿ.ಎನ್.ಎ.ಪರೀಕ್ಷೆಗೆ ಕಳುಹಿಸಲಾಗಿತ್ತು. ಇದೀಗ ಡಿ.ಎನ್.ಎ.ವರದಿ ಲಭಿಸಿದ್ದು ಗರ್ಭ ಧರಿಸಲು ಕಾರಣ ಕೇಸು ದಾಖಲಿಸಲ್ಪಟ್ಟ ಯುವಕನಲ್ಲ ಎಂದು ಹೇಳಲಾಗಿದೆ.
0 Comments