Ticker

6/recent/ticker-posts

ಶತಾಯುಷಿ ಸರಸ್ವತಿ ಸೂರಪ್ಪ ಹೆಗ್ಡೆ ನಿಧನ


 ಉಡುಪಿ :   ಕಲೆ ಸಾಹಿತ್ಯ ಸಾಮಾಜಿಕ ರಂಗದ ಮಾರ್ಗದರ್ಶಕ, ಪ್ರೋತ್ಸಾಹಕ, ಸಂಘಟಕ ಸರ್ವೊತ್ತಮ ಶೆಟ್ಟಿ ಅಬುಧಾಬಿ ಅವರ ಮಾತೃಶ್ರೀ ಶತಾಯುಷಿ ಸರಸ್ವತಿ ಸೂರಪ್ಪ ಹೆಗ್ಡೆ (102} ವಯೋ ಸಹಜ ಅಸೌಖ್ಯದಿಂದ ಬುಧವಾರ ನಿಧನರಾದರು.ಇವರ ಪತಿ ಈ ಹಿಂದೆಯೇ ನಿಧನರಾಗಿದ್ದು ಮೃತರು ಮಕ್ಕಳಾದ ಸರ್ವೊತ್ತಮ‌ ಶೆಟ್ಟಿ (ಅಬುಧಾಬಿ ಉದ್ಯಮಿ), ಪುರುಷೋತ್ತಮ ಶೆಟ್ಟಿ, ಸರೋಜ ನಾರಾಯಣ ಶೆಟ್ಟಿ, ವಸಂತ ಶೆಟ್ಟಿ, ಪ್ರಶಾಂತ್ ಹೆಗ್ಡೆ(ಅಬುಧಾಬಿ), ಶೋಭ ದಿನೇಶ್ ಶೆಟ್ಟಿ, ಸೊಸೆಯಂದಿರಾದ ಉಷಾ ಶೆಟ್ಟಿ ಲತಾ ಶೆಟ್ಟಿ,ಶ್ಯಾಮಲ ಹೆಗ್ಡೆ,ಅಳಿಯಂದಿರಾದ ಚಂದ್ರ ಶೆಟ್ಟಿ, ನಾರಾಯಣ ಶೆಟ್ಟಿ,ದಿನೇಶ್ ಶೆಟ್ಟಿ ಹಾಗೂ ಅಪಾರ ಬಂಧು ಬಳಗವನ್ನಗಲಿದ್ದಾರೆ. ಮೃತರ ಅಂತ್ಯ ಸಂಸ್ಕಾರ ನಾಳೆ (ಗುರುವಾರ) ಬೆಳಗ್ಗೆ 9 ಗಂಟೆಗೆ ಪರೀಕ ಮನೆಯಲ್ಲಿ ಜರಗಲಿದೆ. ಮೃತರ ನಿಧನಕ್ಕೆ ಯುಎಇ ಬಂಟ್ಸ್ ನ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ ಹಾಗೂ ಎಲ್ಲಾ ಪದಾಧಿಕಾರಿಗಳು, ಕರ್ನಾಟಕ ಸಂಘ ಅಬುಧಾಬಿಯ ಪದಾಧಿಕಾರಿಗಳು,ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇಯ ಸಂಚಾಲಕರಾದ ದಿನೇಶ್ ಶೆಟ್ಟಿ ಕೊಟ್ಟಿಂಜ,ಪಟ್ಲ ಪೌಂಡೇಶನ್ ದುಬೈ ಘಟಕ ಶ್ರದ್ಧಾಂಜಲಿ ಸಲ್ಲಿಸಿದೆ.

Post a Comment

0 Comments