ವಿದ್ಯಾರ್ಥಿಗಳು ಮಾದಕ ವಸ್ತುಗಳ ಅಡಿಯಾಳಾಗುತ್ತಿದ್ದಾರೆ ಎಂಬ ಸಾಮಾಜಿಕ ಆತಂಕದ ನಡುವೆ ಇಲ್ಲೊರ್ವ ಒಂಭತ್ತನೇ ತರಗತಿ ವಿದ್ಯಾರ್ಥಿ ಅದೇ ಮಾದಕ ವಸ್ತು ಸೇವನೆ ವಿರುದ್ದ ಕಿರು ಚಿತ್ರ ನಿರ್ಮಿಸಿ ಜಾಗೃತಿ ಹುಟ್ಟಿಸುತ್ತಾ ಜನಪ್ರೀತಿ ಗಳಿಸುತ್ತಿದ್ದಾನೆ.
ಕಾಂಞಂಗಾಡ್ ಕೇಂದ್ರೀಯ ವಿದ್ಯಾಲಯದ 9ನೇ ತರಗತಿ ವಿದ್ಯಾರ್ಥಿ ದೇವಾಶಿಶ್ ಹಾಗೂ ಸಂಗಡಿಗರು ನಿರ್ಮಿಸಿದ ಕಿರು ಚಿತ್ರ ಇದೀಗ ಸಾಮಾಜಿಕ ಜಾಣ ತಾಣದಲ್ಲಿ ವೈರಲ್ ಆಗುತ್ತ ಜನ ಮೆಚ್ಚುಗೆ ಗಳಿಸುತ್ತಿದೆ. ಮೆಲ್ಪರಂಬ್ ಇನ್ಸ್ ಪೇಕ್ಟರ್ ಎ.ಸಂತೋಷ್ ಕುಮಾರ್ ಗೆ ಚಿಕ್ಕಂದಿನಿಂದಲೇ ಇರುವ ಆಸಕ್ತಿ ಅಭಿರುಚಿಯಿಂದ ಇದೀಗ ಸ್ವತಃ ಕಿರುಚಿತ್ರ ನಿರ್ದೇಶನ ಹಾಗೂ ಸಂಕಲನ ನಡೆಸಲು ಸಾದ್ಯವಾಗಿದ್ದು ಆರನೇ ತರಗತಿ ವಿದ್ಯಾರ್ಥಿನಿಯಾದ ದಿಯಾ ಮಧುಸೂದನ್, ಸಹೋದರ ಧ್ಯಾನ್ ವೀಕ್, ಗೆಳೆಯರಾದ ಅಬ್ರರಿ ನಾಥ್ ಎಂಬವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಮೊಬೈಲ್ ನಲ್ಲಿ ವಿಡಿಯೋ ಚಿತ್ರೀಕರಿಸಿ ಮನೋಜ್ಞವಾಗಿ ಸಂಕಲನಗೈದಿರುವುದು ಈ ಹೃಸ್ವ ಚಿತ್ರದ ಪ್ಲಸ್ ಪೊಯಿಂಟ್ ಆಗಿದೆ ಎಂದು ಜನ ಅಭಿಪ್ರಾಯ ಪಡುತ್ತಿದ್ದಾರೆ.
0 Comments