Ticker

6/recent/ticker-posts

ಎರಡನೇ ಪಿಣರಾಯಿ ವಿಜಯನ್ ಸರಕಾರದ 4 ನೇ ವಾರ್ಷಿಕ ಎಪ್ರಿಲ್ 21 ರಿಂದ ಒಂದು ತಿಂಗಳ ಕಾಲ ಆಚರಣೆ


 ತಿರುವನಂತಪುರಂ: ಎರಡನೇ ಪಿಣರಾಯಿ ವಿಜಯನ್ ಸರಕಾರದ ನಾಲ್ಕನೇ ವಾರ್ಷಿಕವನ್ನು ವಿವಿದ ಕಾರ್ಯಕ್ರಮಗಳೊಂದಿಗೆ ಆಚರಿಸಲು ಸಚಿವ ಸಂಪುಟ ನಿರ್ದರಿಸಿದೆ.  ಸ್ಥಳೀಯಾಡಳಿತೆಯಿಂದ ಮೊದಲ್ಗೊಂಡು ಜಿಲ್ಲಾ, ರಾಜ್ಯ ಮಟ್ಟದವರೆಗೆ ವಿವಿದ ಕಾರ್ಯಕ್ರಮಗಳು ನಡೆಯಲಿವೆ. ಎಪ್ರಿಲ್ 21 ರಂದು ಕಾಸರಗೋಡಿನಲ್ಲಿ ಕಾರ್ಯಕ್ರಮ ಆರಂಭವಾಗಲಿದ್ದು ಮೇ 21 ರಂದು ತಿರುವನಂತಪುರಂನಲ್ಲಿ ಸಮಾಪ್ತಿಗೊಳ್ಳಲಿದೆ. ಜಿಲ್ಲಾ ಮಟ್ಟದ ಎಲ್ಲ ಕಾರ್ಯಕ್ರಮಗಳಲ್ಲೂ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭಾಗವಹಿಸುವರು. ಅಲ್ಲದೆ ಸಚಿವ ಸಂಪುಟದ ಇತರ ಸಚಿವರುಗಳು ಸಹ ಭಾಗವಹಿಸುವರು. ಮುಖ್ಯಮಂತ್ರಿಯ ಕಾರ್ಯಕ್ರಮದಲ್ಲಿ ಸರಕಾರದಿಂದ ವಿವಿದ ಸವಲತ್ತುಗಳು ಲಭಿಸಿದ ಫಲಾನುಭವಿಗಳು, ಹಿರಿಯ ವ್ಯಕ್ತಿಗಳು ಭಾಗವಹಿಸುವರು. ಸರಕಾರದ ವಿವಿದ ಅಭಿವೃದ್ಧಿ ಯೋಜನೆಗಳ ಬಗ್ಗೆ ಜಿಲ್ಲಾ ಮಟ್ಟದಲ್ಲಿ ಒಂದು ವಾರದ ಪ್ರದರ್ಶನ ಸಹ ಇರಲಿದೆ

Post a Comment

0 Comments