ಸಿಡಿಲಿನ ಅಬ್ಬರಕ್ಕೆ 25 ದಿನಗಳ ಹಿಂದೆ ಹೃದಯ ಶಸ್ತ್ರಕ್ರಿಯೆಗೊಳಗಾದ ಬಾಲಕಿ ಮೃತಪಟ್ಟ ಘಟನೆ ನಡೆದಿದೆ. ನೇಪಾಳ ನಿವಾಸಿ ಹಾಗೂ ಚಿಮೇನಿಯಲ್ಲಿ ವಾಸಿಸುವ ಸಂಜೀವ ಬೋರ ಎಂಬವರ ಪುತ್ರಿ ಅಸ್ಮಿತ (2 ವರ್ಷ) ಮೃತಪಟ್ಟ ಬಾಲಕಿ. ನಿನ್ನೆ (ಮಂಗಳವಾರ) ರಾತ್ರಿ ಈ ಘಟನೆ ನಡೆದಿದೆ. ಭಾರೀ ಸಿಡಿಲಿನ ಶಬ್ದ ಕೇಳಿ ಬಾಲಕಿ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದು ಕೂಡಲೇ ಪೆರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕೊಂಡೊಯ್ದರೂ ಪ್ರಾಣ ಉಳಿಸಲಾಗಲಿಲ್ಲ.
ಹುಟ್ಟಿನಿಂದಲೇ ಹೃದಯ ಸಂದಂಧ ಖಾಯಿಲೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಊರವರ ನೆರವಿನೊಂದಿಗೆ ಅಸ್ಮಿತಳಿಗೆ ಕೊಚ್ಚಿನ್ ಅಮೃತಾ ಆಸ್ಪತ್ರೆಯಲ್ಲಿ ಹೃದಯ ಶಸ್ತ್ರಕ್ರಿಯೆ ನಡೆಸಲಾಗಿತ್ತು. ಅನಂತರ ಮನೆಗೆ ತಂದು ವಿಶ್ರಾಂತಿ ಪಡೆಯುತ್ತಿದ್ಧಂತೆಯೇ ಬಾಲಕಿ ಇದೀಗ ಕೊನೆಯುಸಿರೆಳೆದಿದ್ದಾಳೆ. ಸಂಜೀವ ಬೋರ ಹಾಗೂ ಪತ್ನಿ ಪನೇರ ಬೋರ ಎಂಬಿವರು ಚಿಮೇನಿ ಮುತ್ತುಪಾರಪ್ಪಳ್ಳಿ ಬಳಿಯ ಫಾರ್ಮ್ ನಲ್ಲಿ ಕಾರ್ಮಿಕರಾಗಿದ್ದಾರೆ
0 Comments