Ticker

6/recent/ticker-posts

ಧರ್ಮ ಪ್ರೇಮದ ಜತೆಗೆ ರಾಷ್ಟ್ರ ಪ್ರೇಮವೂ ಅಗತ್ಯ : ಒಡಿಯೂರು ಶ್ರೀ , ದೇಲಂಪಾಡಿ ಬ್ರಹ್ಮಕಲಶೋತ್ಸವ ಪಂಚಮ ದಿನ ಧಾರ್ಮಿಕ ಸಭೆ


 

ದೇಲಂಪಾಡಿ : ದೇಶವು ಆತಂಕಕಾರಿ ಸನ್ನಿವೇಶ ಎದುರಿಸುತ್ತಿದೆ. ವಿವಿದೆಡೆಗಳಿಂದ ವಿವಿಧ ರೀತಿಯ ದಾಳಿಗಳು ಷಡ್ಯಂತ್ರಗಳು ನಡೆಯುತ್ತಿದೆ. ಇದನ್ನೆಲ್ಲ ಎದುರಿಸುವ ನಿಟ್ಟಿನಲ್ಲಿ ನಮ್ಮಲ್ಲೂ ಧರ್ಮ‌ಪ್ರೇಮದ ಜತೆಗೆ ರಾಷ್ಟ್ರ ಪ್ರೇಮ ಸೃಷ್ಠಿಸುವ ಮಹತ್ಕಾರ್ಯ ಅಗಬೇಕಾದುದು ಇಂದಿನ ಅಗತ್ಯ ಎಂದು ಒಡಿಯೂರು ಗುರುದೇವದತ್ತ ಸಂಸ್ಥಾನದ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ನುಡಿದರು. ಅವರು ದೇಲಂಪಾಡಿ ಶ್ರೀ ಮಹಾಲಿಂಗೇಶ್ವರ ಕ್ಷೇತ್ರದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಅಂಗವಾಗಿ ನಡೆದ ಪಂಚಮ‌ದಿನದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು. ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ 

ಗಿರಿಧರ ಶೆಟ್ಟಿ, ಮಂಗಳೂರು ಅಧ್ಯಕ್ಷತೆ ವಹಿಸಿದರು. ಧಾರ್ಮಿಕ ಮುಂದಾಳು

ಡಾ.ಸೋಂದೆ ಭಾಸ್ಕರ್ ಭಟ್ ಧಾರ್ಮಿಕ ಉಪನ್ಯಾಸ ನೀಡುತ್ತಾ ಈಗೀನ‌ ಕಾಲಘಟ್ಟದಲ್ಲಿ ಆಧುನಿಕತೆಯ ಜತೆಗೆ ಅನುಕರಣ ಸನ್ನಿವೇಷ ನಿರ್ಮಾಣವಾಗುತ್ತಿದ್ದು  ದೇವರು ಮತ್ತು ದೈವಗಳ ವ್ಯತ್ಯಾಸ ಸಂಪ್ರದಾಯಗಳು ತಿಳಿಯದ ರೀತಿಯ ಮೌಢ್ಯತನಕ್ಕೆ ಸಮಾಜ ಸಾಕ್ಷಿಯಾಗುತ್ತಿದೆ ಎಂದರು. ಮಾಜಿ ಸಂಸದ  ನಳಿನ್ ಕುಮಾರ್ ಕಟೀಲು,ವಿ.ಹಿಂ.ಪ.ದ.ಕ.ಜಿಲ್ಲಾ ಅಧ್ಯಕ್ಷ  ಎಚ್.ಕೆ ಪುರುಷೋತ್ತಮ್,ಎಂಸಿಎಫ್ ನಿವೃತ್ತ ಪ್ರಬಂಧಕ ಜಯಶಂಕರ್ ರೈ ಪುತ್ತಿಗೆ ಮುಖ್ಯ ಅತಿಥಿಗಳಾಗಿ ಮಾತನಾಡಿದರು.  ಸಂಜೀವ ಸಿ ಬಾಡೂರು, ಪುತ್ತಿಗೆ ಪಂ.ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಪಾಲಾಕ್ಷ ರೈ ಪುತ್ತಿಗೆ,ಉಮೇಶ ಆಚಾರ್ಯ ಬೆಂಗಳೂರು, ವಿಜಯ ಕುಮಾರ್ ರೈ,ಸುಧಾಮ ಗೋಸಾಡ,ರಣದೀಪ್ ಕಾವೂರು,ಉದಯ ಕುಮಾರ್ ಶೆಟ್ಟಿ,ದೇವದಾಸ್ ಮೊದಲಾದವರು  ಉಪಸ್ಥಿತರಿದ್ದರು. ಅಶೋಕ್ ಬಾಡೂರು ಸ್ವಾಗತಿಸಿ, ಆನಂದ ಎಂ ಕೆ ವಂದಿಸಿದರು. ಜಯ ಮಣಿಯಂಪಾರೆ ನಿರೂಪಿಸಿದರು. 

Post a Comment

0 Comments