Ticker

6/recent/ticker-posts

Ad Code

ಜುಗಾರಿ ಅಡ್ಡೆಗೆ ಪೊಲೀಸ್ ದಾಳಿ; 10 ಮಂದಿಯ ಸೆರೆ, 94,320 ರೂ ‌ವಶ.


 ಕಾಸರಗೋಡು: ಇಲ್ಲಿನ  ಅಂಬಲತ್ತರ ಕಾಲಿಚ್ಚಿನಡ್ಕದಲ್ಲಿ ಜುಗಾರಿ ನಿರತರಾಗಿದ್ದ 10 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಆಟಕ್ಕೆ ಬಳಸಿದ 94,320 ರೂ.ಗಳನ್ನು ವಶಪಡಿಸಲಾಗಿದೆ. ಕಾಲಿಚ್ಚಿನಡ್ಕ ನಿವಾಸಿ ರಘು(57), ಪರಪ್ಪ ನಿವಾಸಿ ಸುಜಿ(25), ಕಿನಾನೂರು ನಿವಾಸಿ ವೇಣುಗೋಪಾಲ (56),  ಕಾಲಿಚ್ಚಿನಡ್ಕ ನಿವಾಸಿ ಸಹದ್(19), ಏಚ್ಚಿಕಾನಂ ನಿವಾಸಿ ವಿನೋದ್ ಕುಮಾರ್ (46),  ಅಜಿತ್ ಬಾಲಕೃಷ್ಣನ್(42), ಚಾಪ್ಪ ನಿವಾಸಿ ಬ್ರಿಜೇಶ್(39), ಉಬೈಸ್(33), ಅನೀಶ್(40), ಸುರೇಶ್ (42) ಬಂಧಿತ ಆರೋಪಿಗಳು. ನಿನ್ನೆ(ಶನಿವಾರ) ರಾತ್ರಿ 11.30 ಕ್ಕೆ ಅಂಬಲತ್ತರ ಎಸ್.ಐ.ಲತೀಶ್ ಹಾಗೂ ತಂಡದ ನೇತೃತ್ವದಲ್ಲಿ ದಾಳಿ ನಡೆದಿದೆ ‌

Post a Comment

0 Comments