Ticker

6/recent/ticker-posts

Ad Code

ಮುಂಡಿತ್ತಡ್ಕ ಶಾಲಾ ನಿವೃತ್ತ ಜವಾನ ಸುಂದರ ಪುರುಷ ನಿಧನ

 


ಪೆರ್ಲ : ಮುಂಡಿತ್ತಡ್ಕ ಮಂಜಯ್ಯ ಸ್ಮಾರಕ ಎಯುಪಿ ಶಾಲಾ ಜವಾನರಾಗಿ (ಪ್ಯೂಯನ್) ನಿವೃತ್ತರಾದ ಸಾಮಾಜಿಕ ,ಧಾರ್ಮಿಕ ಕಾರ್ಯಕರ್ತ ಸುಂದರ ಪುರುಷ ಮುಂಡಿತ್ತಡ್ಕ (65) ಇಂದು ಮುಂಜಾನೆ ನಿಧನರಾದರು. ಸುಮಾರು 40 ವರ್ಷಗಳ ಕಾಲ ಜವಾನರಾಗಿ ಸೇವೆ ಸಲ್ಲಿಸಿದ್ದರು.

ಅಲ್ಪ ಕಾಲದ ಅಸೌಖ್ಯದಿಂದ ಬಳಲುತ್ತಿದ್ದ ಅವರು ಕಾಸರಗೋಡು ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಮುಂಡಿತ್ತಡ್ಕ ಶ್ರೀಮಹಾವಿಷ್ಣು ಭಜನಾ ಸಂಘದ ಸ್ಥಾಪಕ ಸದಸ್ಯರೂ ಶ್ರೀ ವಿಷ್ಣು ಕಲಾವೃಂದದ ಮಾಜಿ ಅಧ್ಯಕ್ಷರೂ ಆಗಿದ್ದ ಇವರು ಸಾಮಾಜಿಕ ಧಾರ್ಮಿಕ ರಂಗದಲ್ಲಿ ಜನಾನುರಾಗಿಯಾಗಿದ್ದರು‌. ಮೃತರ ನಿಧನಕ್ಕೆ ಈ ಸಂಘ ಸಂಸ್ಥೆಗಳು ಸಂತಾಪ ವ್ಯಕ್ತಪಡಿಸಿದೆ. ಮೃತರು ಪತ್ನಿ ಸರೋಜಿನಿ ಪುತ್ರ ಧನರಾಜ್, ಪುತ್ರಿ ಧನ್ಯಶ್ರೀ, ಅಳಿಯ ಪ್ರವೀಣ್, ಸೊಸೆ ಅಕ್ಷತ,ಸಹೋದರ ಶೀನ ಪುರುಷ ಪುತ್ತಿಗೆ ಸಹಿತ ಅಪಾರ ಬಂಧು ಬಳಗವನ್ನಗಲಿದ್ದಾರೆ.

Post a Comment

0 Comments