ಮುಳ್ಳೇರಿಯ: ಕಾರಡ್ಕ ಸ್ನೇಹ ಬಡ್ಸ್ ಶಾಲೆಯಲ್ಲಿ 2025-26ನೇ ಶೈಕ್ಷಣಿಕ ವರ್ಷದ ಪ್ರವೇಶೋತ್ಸವ ನಡೆಯಿತು.
ಕಾರಡ್ಕ ಗ್ರಾಮ ಪಂಚಾಯಿತಿ ಕ್ಷೇಮ ಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಪುಷ್ಪಾ ಉದ್ಘಾಟಿಸಿದರು. ವಾರ್ಡು ಸದಸ್ಯೆ ತಪ್ಪಿ ಹಮೀದ್ ಅಧ್ಯಕ್ಷತೆ ವಹಿಸಿದ್ದರು. ಎಸ್ ಡಿಎಂಸಿ ಕಿಶೋರ್ ಕುಮಾರ್, ಪಿಟಿಎ ಅಧ್ಯಕ್ಷ ಸತ್ಯನಾರಾಯಣ, ಗ್ರಾಮ ಪಂಚಾ ಯಿತಿ ಸಹ ಕಾರ್ಯದರ್ಶಿ ಅಬ್ದುಲ್ ರಹಿಮಾನ್, ಸಿಡಿಎಸ್ ಅಧ್ಯಕ್ಷೆ ಸವಿತಾ ಉಪಸ್ಥಿತರಿದ್ದರು.
ಹೊಸದಾಗಿ ಪ್ರವೇಶ ಪಡೆದ ಶಾಲಾ ಮಕ್ಕಳನ್ನು ಹೂಗುಚ್ಛ ನೀಡಿ ಸ್ವಾಗತಿಸಲಾ ಯಿತು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯ ಕ್ರಮ ನಡೆಯಿತು. ಕುಟುಂಬಶ್ರೀ ಸದಸ್ಯರು, ಎಸ್‌ಎಸ್‌ಜಿ ಸದಸ್ಯರು, ಪೋಷಕರು ಉಪಸ್ಥಿತರಿದ್ದರು. ಮಕ್ಕಳಿಗೆ ಬಹುಮಾನ, ಸಿಹಿತಿಂಡಿ ವಿತರಿಸಲಾ ಯಿತು. ಸ್ನೇಹಿತೆ ಹೆಲ್ಸ್ ಡೆಸ್ಕಿನ ಕನ್ಸಿಲರ್ ಶೋಭನಾ ಪೋಷಕರಿಗೆ ತರಗತಿ ನಡೆಸಿದರು. ಪ್ರಿನ್ಸಿಪಾಲ್ ಭಾರತಿ ಸ್ವಾಗತಿಸಿದರು. ಪುಷ್ಪಲತಾ ಟೀಚರ್ ವಂದಿಸಿದರು.
0 Comments