Ticker

6/recent/ticker-posts

Ad Code

ಬದಿಯಡ್ಕ ಪೇಟೆಯಲ್ಲಿ ಹಲವು ವರ್ಷಗಳಿಂದ ಕ್ಲಿನಿಕ್ ನಡೆಸುತ್ತಿರುವ ಡಾಕ್ಟರ್ ಸಿ.ಎಚ್.ಗೋಪಾಲಕೃಷ್ಣ ಭಟ್ ನಿಧನ


 ಬದಿಯಡ್ಕ: ಇಲ್ಲಿನ ಬಸ್ಸು ನಿಲ್ದಾಣದ ಮುಂಭಾಗದಲ್ಲಿ ಹಲವು ವರ್ಷಗಳಿಂದ ಕ್ಲಿನಿಕ್ ನಡೆಸುತ್ತಿರುವ ಡಾಕ್ಟರ್ ಸಿ.ಎಚ್.ಗೋಪಾಲಕೃಷ್ಣ ಭಟ್(85) ನಿಧನರಾದರು. ಅವರು  ನಿನ್ನೆ(ಶುಕ್ರವಾರ) ರಾತ್ರಿ ಬದಿಯಡ್ಕ ಮನೆಯಲ್ಲಿ ಕೊನೆಯುಸಿರೆಳೆದರು.

ಚಾಲತ್ತಡ್ಕ ಡಾಕ್ಟರ್ ಎಂದೇ ಹೆಸರುವಾಸಿಯಾದ ಅವರು ಕಡಿಮೆ ಹಣದಲ್ಲಿ ಬಡವರಿಗೆ ತಪಾಸಣೆ, ಔಷದಿ ನೀಡುವ ಮೂಲಕ ಜನಾನುರಾಗಿದ್ದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ವಯಂಸೇವಕರೂ ಧಾರ್ಮಿಕ ಮುಂದಾಳು ಆಗಿದ್ದರು. ಮೃತರು ಪತ್ನಿ ಶಾರದಮ್ಮ, ಮಕ್ಕಳಾದ ಶ್ಯಾಮ ಪ್ರಸಾದ್( ಇಂಜಿನಿಯರ್ ಮಂಗಳೂರು), ಡಾ.ಪ್ರದೀಪ್ ಕುಮಾರ್(ಬದಿಯಡ್ಕ), ಸೊಸೆಯಂದಿರಾದ ಸೌಮ್ಯ, ಡಾ.ಸಂದ್ಯಾ ಸಾವಿತ್ರಿ (ಬದಿಯಡ್ಕ) ಎಂಬಿವರನ್ನು ಅಗಲಿದ್ದಾರೆ

Post a Comment

0 Comments