Ticker

6/recent/ticker-posts

Ad Code

ಅಂಗನವಾಡಿ ಪರಿಸರದಲ್ಲಿ ನಡೆಯುತ್ತಿದ್ದ ಕೋಳಿ ಅಂಕದ ಅಡ್ಡೆಗೆ ಪೊಲೀಸರ ದಾಳಿ ಮೂರು ಮಂದಿಯ ಸೆರೆ, ಮೂರು ಕೋಳಿ, 700 ರೂ.ವಶ


ಬದಿಯಡ್ಕ: ಕಂಗಿಲ ಅಂಗನವಾಡಿ ಪರಿಸರದಲ್ಲಿ ಕೋಳಿ ಅಂಕದಲ್ಲಿ ನಿರತರಾಗಿದ್ದ ಮೂರು ಮಂದಿಯನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ. ಹೇರೂರು ಮೀಪುಗುರಿ ಭಟ್ಯಪದವು ನಿವಾಸಿ  ಜೋಯ್ ಮಚಾದೊ(40), ಕಾಟುಕುಕ್ಕೆ ಚೀಮುಳ್ಳು ನಿವಾಸಿ  ರಿತೇಶ್ ಕಿರಣ್(36), ಎಣ್ಮಕಜೆ ಶೇಣಿ ನಿವಾಸಿ ಶಿವಪ್ರಸಾದ್(36) ಬಂಧಿತರು. ನಿನ್ನೆ (ಆದಿತ್ಯವಾರ) ಸಾಯಂಕಾಲ 5.40 ಕ್ಕೆ ಬದಿಯಡ್ಕ ಪೊಲೀಸರು ನಡೆಸಿದ ದಾಳಿಯಲ್ಲಿ ಇವರನ್ನು ಸೆರೆ ಹಿಡಿಯಲಾಗಿದೆ. ಕೋಳಿ ಅಂಕದ ಮೂರು ಕೋಳಿ, 700 ರೂ.ವಶಪಡಿಸಲಾಗಿದೆ.


 

Post a Comment

0 Comments