Ticker

6/recent/ticker-posts

Ad Code

ಬೇಳ, ಕಟ್ಟದಂಗಡಿ, ಕಿಳಿಂಗಾರಿನಲ್ಲಿ ವ್ಯಾಪಕ ಹುಚ್ಚುನಾಯಿ ಕಡಿತ : ಹಲವರು ಆಸ್ಪತ್ರೆಗೆ


ಸೀತಾಂಗೋಳಿ : ಸಮೀಪದ ಕಟ್ಟತಂಗಡಿಯಲ್ಲಿ ಬೀದಿ ನಾಯಿಗಳ ಕಾಟ ತೀವ್ರಗೊಂಡಿದ್ದು ಹಲವರು ಕಡಿತಕ್ಕೊಳಗಾದ ಬಗ್ಗೆ ವರದಿಯಾಗಿದೆ. ಇಲ್ಲಿನ ಕಟ್ಟದಂಗಡಿಯ ಪ್ರಸನ್ನ (45), ಸಿರಿಲ್ ಮಾಸ್ಟರ್ (50), ಸ್ಟೀವನ್ (40), ಮತ್ತು ಮೇರಿ ಮೊಂತೆರೋ (60) ಎಂಬಿವರು  ನಾಯಿ ಕಡಿತಕ್ಕೊಳಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಿಳಿಂಗಾರ್ ಪ್ರದೇಶದಲ್ಲಿಯೂ  ಹಲವಾರು ಜನರನ್ನು ನಾಯಿಗಳು ಕಚ್ಚಿವೆ ಎಂದು ವರದಿಯಾಗಿದೆ. 

ಭಾನುವಾರ ರಾತ್ರಿ 8 ಗಂಟೆ ಸುಮಾರಿಗೆ ಕಟ್ಟತಂಗಡಿ ತಲುಪಿದ ನಾಯಿ, ನಡೆದುಕೊಂಡು ಹೋಗುತ್ತಿದ್ದ ಜನರು ಮತ್ತು ಅಂಗಡಿಯಿಂದ ಸಾಮಾಗ್ರಿಗಳನ್ನು  ಖರೀದಿಸಲು ಬಂದವರ ಮೇಲೆ ದಾಳಿ ಮಾಡಿದೆ. ಕಟ್ಟತಂಗಡಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೀದಿ ನಾಯಿಗಳ ಕಾಟ ಅಧಿಕವಾಗಿದೆ. ರಸ್ತೆಯಲ್ಲಿ ಓಡಾಡುವ ನಾಯಿಗಳ ಹಿಂಡು ವಾಹನ ಸವಾರರಿಗೂ ಅಪಾಯಕಾರಿಯಾಗಿ ಪರಿಣಮಿಸಿದೆ. ಬೀದಿ ನಾಯಿಗಳ ಕಾಟವನ್ನು ನಿವಾರಿಸಲು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.





Post a Comment

0 Comments