Ticker

6/recent/ticker-posts

Ad Code

ಕಿಳಿಂಗಾರು ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಭ್ರಮದ ಪ್ರವೇಶೋತ್ಸವ


ಬದಿಯಡ್ಕ: ಕಿಳಿಂಗಾರು ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯ 2025-26 ನೇ ಶೈಕ್ಷಣಿಕ ವರ್ಷದ ಪ್ರಿ-ಪ್ರೈಮರಿ ಹಾಗೂ ಶಾಲಾ ಪ್ರವೇಶೋತ್ಸವವನ್ನು‌ ಬಹು ವಿಜೃಂಭಣೆಯಿಂದ ಆಚರಿಸಲಾಯಿತು. ಶಾಲಾ ವ್ಯವಸ್ಥಾಪಕರಾದ ಕೊಡುಗೈದಾನಿ ಸಾಯಿರಾಂ ಕೆ.ಎನ್ ಕೃಷ್ಣ ಭಟ್ ಉದ್ಘಾಟಿಸಿದರು. ಪಿ.ಟಿ.ಎ ಅಧ್ಯಕ್ಷರಾದ ವಿಷ್ಣು ಪ್ರಕಾಶ್ ಪೆರ್ವ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಮುಖ್ಯೋಪಾಧ್ಯಾಯರಾದ ರಾಮಕೃಷ್ಣ ಭಟ್, ಶಿವ ಪ್ರಸಾದ್ ಹೊಸಮನೆ, ಮಾತೃ ಸಂಘದ ಅಧ್ಯಕ್ಷೆ ದಿವ್ಯಲಕ್ಷ್ಮಿ ಉಪಸ್ಥಿತರಿದ್ದರು. ಈ ವರ್ಷದ ಹೊಸದಾಗಿ ಸೇರ್ಪಡೆಗೊಂಡ ಮಕ್ಕಳನ್ನು ಮೆರವಣಿಗೆಯೊಂದಿಗೆ ಸ್ವಾಗತಿಸಲಾಯಿತು.


ಶಾಲೆಯ ಪೂರ್ವ ವಿದ್ಯಾರ್ಥಿ ಶ್ರೀ  ಶ್ರೀನಿಧಿ ನಿಡುಗಳ  ಅವರ  ಕಂಪೆನಿಯು ( Vantiva Bangalore ) ಈ ಶೈಕ್ಷಣಿಕ ವರ್ಷ  ನಮ್ಮ ಶಾಲೆಯ 1ನೇ ತರಗತಿಯಿಂದ 4 ನೇ ತರಗತಿಯ ಮಕ್ಕಳಿಗೆ  ಬ್ಯಾಗ್, ಕಿಟ್ ಹಾಗೂ ನೋಟು ಪುಸ್ತಕಗಳನ್ನು ವಿತರಿಸಲಾಯಿತು . ಕಲಿಕಾ ಕಿಟ್, ಬ್ಯಾಗ್, ಸ್ಲೇಟ್, ಸಮವಸ್ತ್ರ, ಸಿಹಿತಿಂಡಿಗಳನ್ನು  ವಿತರಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀವಿದ್ಯಾ ಎ ಸ್ವಾಗತಿಸಿ, ಅಧ್ಯಾಪಿಕೆ ಸಹನಾ ಯಂ. ವಂದಿಸಿದರು.

 

Post a Comment

0 Comments