Ticker

6/recent/ticker-posts

Ad Code

ಎಣ್ಮಕಜೆಯ ಸಾಯ ವಾರ್ಡ್ ನಿರಂತರ ಐದು ದಿನಗಳಿಂದ ಕತ್ತಲೆಯಲ್ಲಿ..| ಪ್ರತಿಭಟನೆಯತ್ತ ನಾಗರಿಕರು

 


ಸಾಂದರ್ಭಿಕ ಚಿತ್ರ

ಪೆರ್ಲ : ಎಣ್ಮಕಜೆ ಪಂಚಾಯತಿನ ಸಾಯ 1ವಾರ್ಡುಗಳ ನಾಗರಿಕರು 5ನೇ ದಿನವೂ ವಿದ್ಯುತ್ ಇಲ್ಲದೆ ಕತ್ತಲೆಯಲ್ಲಿ ದಿನ ದೂಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಪೆರ್ಲ KSEBಯ ನಿರಂತರ ಅವಗಣನೆ ಇದಕ್ಕೆ ಪ್ರಮುಖ ಕಾರಣವಾಗಿದೆ.ಯಾವುದಾದರು ಅವಘಡ ಸಂಭವಿಸಿದರೆ ಕಛೇರಿ ನಂಬರ್ ಆಗಲಿ ಅವರು ನೀಡಿದಂತಹ ಯಾವುದೇ ನಂಬರ್ ಗೆ ಆಗಲಿ ಕರೆಗಳು ಹೋಗುವುದಿಲ್ಲ.

ಪ್ರತಿವರ್ಷವೂ ಮಳೆಗಾಲ ಆರಂಭವಾದೊಡನೆ ಇಂತಹ ದುಸ್ಥಿತಿ ಈ ಪ್ರದೇಶದ ನಾಗರಿಕರಿಗೆ ತಪ್ಪಿದ್ದಲ್ಲ. ಕುಡಿಯಲು ನೀರಿಗೂ ಪರದಾಡಬೇಕಾದ ಅವಸ್ಥೆ ಇಲ್ಲಿಯ ಜನತೆಗಾಗಿರುತ್ತದೆ. 

ಈ ಪ್ರದೇಶದ ಸಮಸ್ಯೆಗಳಿಗೆ ಕೂಡಲೇ ಪರಿಹಾರಬೇಕು, ವೋಲ್ಟೇಜ್ ಕ್ಷಾಮ ಪರಿಹಾರ ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿಟ್ಟು ನಾಗರಿಕರು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

Post a Comment

0 Comments