Ticker

6/recent/ticker-posts

ಸೌದೆ ಸಂಗ್ರಹಿಸಲು ಕಾಡಿಗೆ ಹೋದ ದಂಪತಿ ಮೇಲೆ ಕಾಡಾನೆ ದಾಳಿ; ಮಹಿಳೆ ಮೃತ್ಯು, ಪತಿಗೆ ಗಂಭೀರ ಗಾಯ


 ಕಾಡಾನೆ ದಾಳಿಯಿಂದ ಮಹಿಳೆ ಮೃತಪಟ್ಟ ಘಟನೆ ನಡೆದಿದೆ. ಇಡುಕ್ಕಿ ಪೀರಮೇಡು ‌ನಿವಾಸಿ ಸೀತ(50) ಮೃತಪಟ್ಟ ಮಹಿಳೆ. ಇಂದು (ಶುಕ್ರವಾರ) ಮದ್ಯಾಹ್ನ 2 ಗಂಟೆಯ ವೇಳೆ ಮನೆಯ ಬಳಿಯ ಕಾಡಿನಲ್ಲಿ ಈ ಘಟನೆ ನಡೆದಿದೆ. ಮದ್ಯಾಹ್ನ ಊಟ ಮಾಡಿದ ನಂತರ ಸೌದೆ ಸಂಗ್ರಹಿಸಲು ಕಾಡಿಗೆ ಹೋಗಿದ್ದಾಗ ಆನೆ ದಾಳಿ ಉಂಟಾಗಿದೆ. ಜತೆಗಿದ್ದ ಪತಿ ಬಿನು ಸಹ ಗಂಭೀರ ಗಾಯಗೊಂಡಿದ್ದಾರೆ. ಅವರನ್ನು ಪೀರಮೇಡು ಆಸ್ಪತ್ರೆಗೆ ದಾಖಲಿಸಲಾಗಿದೆ.

Post a Comment

0 Comments