Ticker

6/recent/ticker-posts

ನೀರ್ಚಾಲು ಬನವಾಸಿಯಲ್ಲಿ ಕಂಡೊಕೋರಿ ಸಂಭ್ರಮ


ನೀರ್ಚಾಲು : ಕಾಸರಗೋಡು ಸರಕಾರಿ ಕಾಲೇಜಿನ ಪ್ರಾಧ್ಯಾಪಕ ಡಾ.ರತ್ನಾಕರ ಮಲ್ಲಮೂಲೆ ಅವರ ಸ್ವಗೃಹ ಬನವಾಸಿ ಯಲ್ಲಿ ಕೃಷಿಯ - ಬಗ್ಗೆ ಯುವ ತಲೆಮಾರಿಗೆ ಜಾಗೃತಿ ಯನ್ನುಂಟು ಮಾಡುವ ಉದ್ದೇಶದಿಂದ ನೇಜಿನಾಟಿಯ  'ಕಂಡೊಕೋರಿ ಸಂಭ್ರಮ' ರವಿವಾರ ಜರಗಿತು.

ಪದ್ಮಶ್ರೀ ಪುರಸ್ಕೃತ ಭತ್ತದ ತಳಿ ಸಂರಕ್ಷಕ  ಸತ್ಯನಾರಾಯಣ ಬೆಳೇರಿ ಕಾರ್ಯಕ್ರಮ‌ ಉದ್ಘಾಟಿಸಿದರು. 

ಬಳಿಕ ಶಾಲಾ ಕಾಲೇಜು ವಿದ್ಯಾರ್ಥಿಗಳಿಗಾಗಿ ಕೆಸರು ಗದ್ದೆ ಕುಣಿತ, ಕೆಸರು ಗದ್ದೆ ಓಟ, ಕೃಷಿ ಸಂಬಂಧಿ ಜನಪದ ಕ್ರೀಡೆ ಹಾಗೂ ಲಘು ಸ್ಪರ್ಧೆಗಳನ್ನು ನಡೆಸಲಾಯಿತು.

ಪ್ರಾಧ್ಯಾಪಕ ಡಾ.ರಾಜೇಶ್ ಬೆಜ್ಜಂಗಳ, ಶಿಕ್ಷಕರಾದ ದಿವಾಕರ ಬಲ್ಲಾಳ್, ಸುಜಿತ್ ಬೇಕೂರು, ರಾಜೇಶ್ ಮಾಸ್ತರ್ ಅಗಲ್ಪಾಡಿ.ಶ್ರೀನಿವಾಸ ಆಳ್ವ ಕಳತ್ತೂರು, ಡಾ.ರತ್ನಾಕರ ಮಲ್ಲಮೂಲೆ ಮೊದಲಾದವರು ನೇತೃತ್ವ ನೀಡಿದರು.

ಈ ಸಂದರ್ಭದಲ್ಲಿ ಪರಂಪರಾಗತ ಕೃಷಿ ಕಾರ್ಮಿಕರು ಓ ಬೇಲೆ' ಹಾಡಿ ನೊಂದಿಗೆ  ನೇಜಿ ನಾಟಿಗೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಪ್ರಕೃತಿಜನ್ಯ ಪರಿಕರಗಳಿಂದ ಗೊರಬೆ, ಮುಟ್ಟಾಳೆ ಯಂತಹ ಕರಕುಶಲ ಕೃಷಿ ಸಹಾಯಿ ಸಾಮಗ್ರಿಗಳ ಪ್ರದರ್ಶನ ಹಾಗೂ ಮಾಹಿತಿ ನೀಡಲಾಯಿತು.

Post a Comment

0 Comments