Ticker

6/recent/ticker-posts

ಮನೆಯ ಮುಂದೆ ಆಟವಾಡುತ್ತಿದ್ದ ಎಂಟು ವರ್ಷದ ಬಾಲಕ ತೋಡಿನಲ್ಲಿ ಬಿದ್ದು ಮೃತ್ಯು


 ಕುಂಬಳೆ: ಮನೆಯ ಮುಂದೆ ಆಟವಾಡುತ್ತಿದ್ದ ಎಂಟು ವರ್ಷದ ಬಾಲಕ ತೋಡಿನಲ್ಲಿ ಬಿದ್ದು ಮೃತಪಟ್ಟ ದಾರುಣ ಘಟನೆ ನಡೆದಿದೆ. ಬಂದ್ಯೋಡು ಕೊಕ್ಕಚಾಲ್ ನಿವಾಸಿ ಸಾದಾತ್- ಹಾಜಿರ ದಂಪತಿಯ ಪುತ್ರ ಸುಲ್ತಾನ್(8) ಮೃತಪಟ್ಟ ಬಾಲಕ. ಇಂದು (ಸೋಮವಾರ) ಮದ್ಯಾಹ್ನ ಮನೆಯ ಮುಂಭಾಗದಲ್ಲಿ ಆಟವಾಡುತ್ತಿದ್ದ ಬಾಲಕ ನಾಪತ್ತೆಯಾಗಿದ್ದನು. ಮಾಹಿತಿ ತಿಳಿದು ಆಗಮಿಸಿದ ಅಗ್ನಿಶಾಮಕ ದಳ, ಪೊಲೀಸರು ಹಾಗೂ ಊರವರು ಎರಡು ಗಂಟೆಗಳ ಕಾಲ ಹುಡುಕಾಟ ನಂತರ 500 ಮೀಟರ್ ದೂರದಲ್ಲಿ ತೋಡಿನಲ್ಲಿ ಬಾಲಕ ಪತ್ತೆಯಾಗಿದ್ದನು. ಕೂಡಲೇ ಬಾಲಕನನ್ನು ಬಂದ್ಯೋಡು ಆಸ್ಪತ್ರೆಗೆ ತಲುಪಿಸಿದರೂ ಪ್ರಾಣ ಉಳಿಸಲಾಗಲಿಲ್ಲ. ಸುಲ್ತಾನ್ ಉಪ್ಪಳ ನಯಾಬಜಾರಿನ ಆಂಗ್ಲ ಶಾಲೆಯಲ್ಲಿ ವಿದ್ಯಾರ್ಥಿಯಾಗಿದ್ದಾನೆ. ಮೃತನು ತಂದೆ, ತಾಯಿ, ಸಹೋದರ ಸಿದ್ದಿಖ್ ಎಂಬಿವರನ್ನು ಅಗಲಿದ್ದಾರೆ

Post a Comment

0 Comments