ಮುಳ್ಳೇರಿಯ: ಚಲಿಸುತ್ತಿರುವ ಆಟೋ ರಿಕ್ಷಾದ ಮೇಲೆ ಭಾರೀ ಗಾತ್ರದ ಮರ ಬುಡ ಸಮೇತ ಉರುಳಿ ಬಿದ್ದು ಓರ್ವ ಗಾಯಗೊಂಡಿದ್ದಾರೆ.
ಆದೂರು ಸಿ.ಎ.ನಗರ ನಿವಾಸಿ ಹಾಗೂ ನುಳ್ಳೇರಿಯಾದಲ್ಲಿ ಹೋಟೆಲ್ ವ್ಯಾಪಾರಿಯಾಗಿರುವ ಅಬ್ದುಲ್ಲಕುಞ ಗಾಯಗೊಂಡವರು. ಇವರನ್ನು ಮುಳ್ಳೇರಿಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಇಂದು (ಬುದವಾರ) ಬೆಳಗ್ಗೆ ಮುಳ್ಳೇರಿಯ- ಆದೂರು ರಸ್ತೆಯ ಆಲಂತಡ್ಕದಲ್ಲಿ ಈ ಘಟನೆ ನಡೆದಿದೆ.
ಚೆರ್ಕಳ- ಜಾಲ್ಸೂರು ರಸ್ತೆಯ ಎರಡೂ ಬದಿಗಳಲ್ಲಿ ಯಾವುದೇ ಕ್ಷಣ ನೆಲಕ್ಕುರುಳಲು ಸಿದ್ದವಾಗಿರುವ ಹಲವಾರು ಮರಗಳಿವೆ. ಇದನ್ನು ಕಡಿದು ತೆಗೆಯಲು ಅಧಿಕೃತರು ಮುಂದಾಗುತ್ತಿಲ್ಲ ಎಂಬ ದೂರು ಉಂಟಾಗಿದೆ
0 Comments