ಸುಳ್ಯ: ಕೇರಳದ ರಾಜ್ಯ ಲಾಟರಿ ಪ್ರಥಮ ಬಹುಮಾನ 1 ಕೋಟಿ ರೂ ಸುಳ್ಯ ಉಬರಡ್ಕ ನಿವಾಸಿಗೆ ಲಭಿಸಿದೆ. ಕೇರಳ ಲಾಟರಿಯ ಅಗೋಸ್ಟ್ 16 ರಂದು ನಡೆದ ಕಾರುಣ್ಯ (KR 719) ಲಾಟರಿ ಡ್ರಾದಲ್ಲಿ ಪ್ರಥಮ ಬಹುಮಾನ KZ 445643 ನಂಬ್ರಕ್ಕೆ ಬಂದಿದ್ದು ಇದು ಉಬರಡ್ಕ ನಿವಾಸಿ ವಿನಯ್ ಕ್ವಾಟರ್ಸ್ ಮಾಲಕ ವಿನಯ್ ಯಾವಟಿಯವರಿಗೆ ಲಭಿಸಿದೆ. ಕಾಸರಗೋಡು ಮಧು ಲಾಟರೀಸ್ ಮೂಲಕ ಮುಳ್ಳೇರಿಯಾದಲ್ಲಿ ಮಾರಾಟವಾದ ಲಾಟರಿ ಟಿಕೇಟು ಇದಾಗಿದೆ.
0 Comments