Ticker

6/recent/ticker-posts

ಕಿಳಿಂಗಾರು ಯುವ ಕೇಸರಿ ಆರ್ಟ್ಸ್ ಅಂಡ್ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ಅಷ್ಟಮಿ ಕಾರ್ಯಕ್ರಮ ಸೆಪ್ಟೆಂಬರ್ 14 ರಂದು; ಆಮಂತ್ರಣ ಪತ್ರಿಕೆ ಬಿಡುಗಡೆ


ಕಿಳಿಂಗಾರ್:- ಯುವಕೇಸರಿ ಆರ್ಟ್ಸ್ ಅಂಡ್ ಸ್ಪೋರ್ಟ್ಸ್ ಕ್ಲಬ್ ಕಿಳಿಂಗಾರ್ ಇದರ ವತಿಯಿಂದ ಸೆಪ್ಟೆಂಬರ್ 14 ರಂದು ನಡೆಯುವ ಹನ್ನೊಂದನೇ ವರ್ಷದ ಅಷ್ಟಮಿ ಕಾರ್ಯಕ್ರಮದ ನೋಟೀಸ್ ಬಿಡುಗಡೆ ಕಿಳಿಂಗಾರ್ ನಲ್ಲಿ  ಕ್ಲಬ್ಬಿನ ಅಧ್ಯಕ್ಷ ರಾಮ ಬಿ ಇವರ ಅಧ್ಯಕ್ಷತೆಯಲ್ಲಿ ನೆರವೇರಿತು. ಬಾಲಗೋಕುಲ ಬದಿಯಡ್ಕ ತಾಲ್ಲೂಕು ಅಧ್ಯಕ್ಷ, ಯೋಗೀಶ್ ಪೊಡಿಪಳ್ಳ ನೋಟೀಸ್ ಬಿಡುಗಡೆ ಗೊಳಿಸಿದರು. ಬಾಲಗೋಕುಲ ನೀರ್ಚಾಲ್ ಮಂಡಲ ಪ್ರಮುಖ್ ಉಮೇಶ್ ಏನಿಯರ್ಪು ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಕ್ಲಬ್ಬಿನ ಸದಸ್ಯರಾದ ರಂಜಿತ್, ಪ್ರಶಾಂತ್ ಕಿಳಿಂಗಾರ್, ರಾಜೇಶ್ ಹಾಗೂ ಏಕಲವ್ಯ ಬಾಲಗೋಕುಲದ ಪುಟಾಣಿಗಳು ಉಪಸ್ಥಿತರಿದ್ದರು. ಪ್ರಕಾಶ್ ಕಿಳಿಂಗಾರ್ ಸ್ವಾಗತಿಸಿ, ಕಾರ್ಯದರ್ಶಿ ಮನೋಜ್ ಕಿಳಿಂಗಾರ್ ವಂದಿಸಿದರು.

Post a Comment

0 Comments