ಪೆರ್ಲ : 79ನೇ ಸ್ವಾತಂತ್ರೋತ್ಸವದ ಅಂಗವಾಗಿ ಬಣ್ಮುತ್ತಡ್ಕ ಯುವಧಾರ ಸಾರ್ವಜನಿಕ ಗ್ರಂಥಾಲಯದಲ್ಲಿ 'ರಾಷ್ಟ್ರ ಚಳುವಳಿಯಲ್ಲಿ ಸ್ಥಳೀಯ ಸ್ವಾತಂತ್ರ್ಯ ಸಮರಗಳು' ಎಂಬ ವಿಚಾರಗೋಷ್ಠಿ ಜರುಗಿತ್ತು. ರಂಗಭೂಮಿ ನಿರ್ದೇಶಕ ಶಿಕ್ಷಕ ಉದಯ ಸಾರಂಗ 'ವರ್ತಮಾನ ಕಾಲದಲ್ಲೂ ಜೀವಂತಿಕೆ ನೀಡುತ್ತಿರುವ ಸ್ಥಳೀಯ ಸ್ವಾತಂತ್ರ್ಯ ಸಮರಗಳ ಕುರುಹುಗಳು ಮೂಕಪ್ರೇಕ್ಷಕವಾಗಿ ಅಭಿವ್ಯಕ್ತಿಸುತ್ತಿದೆ. ಬಲಿದಾನಿಗಳು ಅಮರರಾಗಿ ಪ್ರತಿ ಭಾರತೀಯ ಮನಸ್ಸಲ್ಲೂ ನೆಲೆಯೂರಿದರೆ, ಚರಿತ್ರೆಯ ಸ್ಥಳಗಳು ಜೀವಂತವಾಗಿ ಪ್ರತೀ ತಲೆಮಾರಿನ ಜೊತೆ ಬದುಕುತ್ತಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಸ್ಥಳೀಯ ಚರಿತ್ರೆಗಳು ಹೋರಾಟಗಾರರನ್ನು ಕಡೆಗಣಿಸದೆ ಯುವ ಪೀಳಿಗೆಗೆ ಪರಿಚಯಿಸುವ ಕೆಲಸಗಳು ಶ್ಲಾಘನೀಯವಾಗಿದೆ' ಎಂದು ಉದ್ಘಾಟಿಸಿ ಮಾತನಾಡಿದರು.ರಮ್ಯಾ ಟೀಚರ್ ದಿಕ್ಸೂಚಿ ಭಾಷಣ ಮಾಡಿದರು. ಗೋಷ್ಠಿಯಲ್ಲಿ ವಿದ್ಯಾರ್ಥಿಗಳು ಊರಿನ ಹಿರಿಯರು ಯುವ ಸಮುದಾಯ ಭಾಗವಹಿಸಿ ಸ್ವಾತಂತ್ರ್ಯ ಹಬ್ಬವನ್ನು ವಿಶೇಷವಾಗಿ ಆಚರಿಸಿದರು.
ಅರುಣಾಕ್ಷಿ ಅಧ್ಯಕ್ಷತೆ ವಹಿಸಿದ್ದರು. ಈಶ್ವರ ಭಟ್ ಬಣ್ಪುತ್ತಡ್ಕ, ಸುಂದರ ನಡುಗುಡ್ಡೆ, ಮೊಹಮ್ಮದ್ ಪುತ್ತು ಪರಪ್ಪೆ, ಸೂಫಿ ಬಣ್ಪುತ್ತಡ್ಕ, ರವೀಂದ್ರ ಏಳ್ಕಾನ, ಸುರೇಶ್ ಬಲ್ತಕಲ್ಲು ಮೊದಲಾದವರು ಉಪಸ್ಥಿತರಿದ್ದರು. ಕಾರ್ಯದಶಿ೯ ವೈ ನಾರಾಯಣ ಸ್ವಾಗತಿಸಿ ಕಾರ್ಯಕ್ರಮ ಸಂಯೋಜಿಸಿದರು. ಮಹಿಳಾ ಕ್ವಿಜ್ ಹಾಗೂ ಎಲ್ ಎಸ್ ಎಸ್ ವಿಜಯಿಗಳಾದ ಮಕ್ಕಳಿಗೆ ನಗದು ಬಹುಮಾನ ನೀಡಲಾಯಿತು.
0 Comments