Ticker

6/recent/ticker-posts

ಸ್ಥಳೀಯಾಡಳಿತೆ ಮತದಾರರ ಪಟ್ಟಿಯಲ್ಲಿ ಅನ್ಯ ರಾಜ್ಯ ಕಾರ್ಮಿಕರ ಹೆಸರು ಸೇರ್ಪಡೆ; ಕ್ರಮ ಕೈಗೊಳ್ಳುವಂತೆ ಬಿಜೆಪಿ ಕೋಜಿಕ್ಕೋಡು ವಲಯ ಉಪಾಧ್ಯಕ್ಷ ವಿಜಯಕುಮಾರ್ ರೈ ಒತ್ತಾಯ


 ಉಪ್ಪಳ:  ಸ್ಥಳೀಯಾಡಳಿತೆ ಚುನಾವಣೆಯ ಮತದಾರರ ಪಟ್ಟಿಯಲ್ಲಿ ಮುಸ್ಲಿಂ‌ಲೀಗ್, ಅನ್ಯ ರಾಜ್ಯ ಕಾರ್ಮಿಕರನ್ನು ಸೇರಿಸುತ್ತಿದೆಯೆಂದು ಬಿಜೆಪಿ ಕೋಜಿಕ್ಕೋಡು ವಲಯ ಉಪಾಧ್ಯಕ್ಷ  ವಿಜಯ ಕುಮಾರ್ ರೈ ದೂರಿದ್ದಾರೆ.‌ ಮಂಗಲ್ಪಾಡಿ, ಕುಂಬಳೆ, ಮಂಜೇಶ್ವರ ಪಂಚಾಯತುಗಳಲ್ಲಿ ಈ ಮತದಾರರ ಸೇರ್ಪಡೆ ಕಂಡು ಬಂದಿದೆ. ಉತ್ತರಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ ರಾಜ್ಯದ ಜನರು ಉದ್ಯೋಗಕ್ಕಾಗಿ ಈ ಪ್ರದೇಶಗಳಿಗೆ ಆಗಮಿಸಿದ್ದು ಇವರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲಾಗುತ್ತಿದೆ. ಇದಕ್ಕಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಲಾಗುತ್ತಿದೆ ಎಂದವರು ಹೇಳಿದರು.  ಪಂಚಾಯತು ಕಾರ್ಯದರ್ಶಿಗಳು, ಜಿಲ್ಲಾಧಿಕಾರಿಗಳು ಸೇರಿ ಈ ಅನಧಿಕೃತ ಮತ ಸೇರ್ಪಡೆ ತಡೆಯಬೇಕು. ಇಲ್ಲವಾದರೆ ಕಾನೂನು ಕ್ರಮ ಕೈಗೊಳ್ಳಬೇಕಾದೀತು ಎಂದು ವಿಜಯ ಕುಮಾರ್ ರೈ ಎಚ್ಚರಿಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯ ಮತದಾರರ ಪಟ್ಟಿಯಲ್ಲೂ ಅನ್ಯ ರಾಜ್ಯ ಕಾರ್ಮಿಕರನ್ನು ಸೇರ್ಪಡೆಗೊಳಿಸಲಾಗಿತ್ತು.

Post a Comment

0 Comments