ಕೋಲ್ಕತ್ತಾ: ಮಾಜಿ ಸಚಿವೆ, ಸಿಪಿಎಂ ನಾಯಕಿ ಮತ್ತು ಪ್ರಜಾಪ್ರಭುತ್ವ ಮಹಿಳಾ ಅಸೋಸಿಯೇಶನ್ ನ ರಾಷ್ಟ್ರೀಯ ಸಮಿತಿ ಅಧ್ಯಕ್ಷೆ ಪಿ ಕೆ ಶ್ರೀಮತಿ ಟೀಚರ್ ಅವರ ಬ್ಯಾಗ್ ಕೊಲ್ಕತ್ತದಲ್ಲಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಕಳವಾಗಿದೆ. ಬ್ಯಾಗ್ ನಲ್ಲಿ 40,000 ರೂ., ಚಿನ್ನದ ಕಿವಿಯೋಲೆಗಳು, ಮೊಬೈಲ್ ಫೋನ್ ಮತ್ತು ಗುರುತಿನ ದಾಖಲೆಗಳಿದ್ದವು ಎಂದು ದೂರಲಾಗಿದೆ. ಮಂಗಳವಾರ ರಾತ್ರಿ ಈ ಘಟನೆ ನಡೆದಿದೆ. ಡೆಮಾಕ್ರಟಿಕ್ ಮಹಿಳಾ ಸಂಘದ ಬಿಹಾರ ರಾಜ್ಯ ಸಮ್ಮೇಳನವನ್ನು ಉದ್ಘಾಟಿಸಲು ಪಿ ಕೆ ಶ್ರೀಮತಿ ಟೀಚರ್ ರೈಲಿನಲ್ಲಿ ತೆರಳುತ್ತಿದ್ದರು. ಕೆಲವು ಮಹಿಳಾ ನೇತಾರೆಯರು ಪ್ರಯಾಣದ ವೇಳೆ ಅವರ ಜತೆಗಿದ್ದರು. ಈ ಬಗ್ಗೆ ರೈಲ್ವೆ ಪೋಲಿಸರಿಗೆ ದೂರು ನೀಡಲಾಗಿದೆ.

0 Comments