Ticker

6/recent/ticker-posts

Ad Code

ಮಡಿಕೈಯಲ್ಲಿ ನಾಡಿಗಿಳಿದ ಚಿರತೆ : ನಾಗರಿಕರು ಬೀತಿಯಲ್ಲಿ

 

                                                                    ಸಂಗ್ರಹಿತ ಚಿತ್ರ

ಕಾಞಂಗಾಡ್: ಮಡಿಕೈ ಸಮೀಪ  ಕಾರಕೋಡ್‌ ಎಂಬಲ್ಲಿ ಚಿರತೆ ಕಾಣಿಸಿಕೊಂಡಿದೆ. ಬೆಳಿಗ್ಗೆ ಕಾನಂ ಎಂಬಲ್ಲಿನ ರಬ್ಬರ್ ತೋಟದಲ್ಲಿ ರಬ್ಬರ್ ಟ್ಯಾಪಿಂಗ್ ಕೆಲಸಗಾರರು  ತೋಟದ ಬಳಿ ಚಿರತೆ  ಓಡಿ ಹೋಗುತ್ತಿರುವುದನ್ನು ನೋಡಿದ್ದರು ಎನ್ನಲಾಗುತ್ತಿದ್ದು ಈ ಪ್ರದೇಶದಲ್ಲಿ ಭೀತಿಯನ್ನು ಸೃಷ್ಟಿಸಿದೆ. ಎರಡು ದಿನಗಳ ಹಿಂದೆ, ಎಚಿಕ್ಕಾನಂ  ಎಂಬಲ್ಲಿಯೂ ಚಿರತೆ ಕಾಣಿಸಿಕೊಂಡಿತ್ತು. ಈ ಪ್ರದೇಶದಲ್ಲಿ ಚಿರತೆಯು ಅಲೆದಾಡುತ್ತಿದೆ ಎಂದು ಸ್ಥಳೀಯರು ಹೇಳುತ್ತಾರೆ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Post a Comment

0 Comments