Ticker

6/recent/ticker-posts

Ad Code

ಕರೆಂಟ್ ಶಾಕ್ ಬಡಿದು ಹೊಟೇಲ್ ಉದ್ಯೋಗಿ ಮೃತ್ಯು


 ಕಾಸರಗೋಡು : ವಿದ್ಯುತ್ ಆಘಾತಕ್ಕೊಳಗಾಗಿ ಹೋಟೆಲ್ ಕಾರ್ಮಿಕನೋರ್ವ  ಸಾವನ್ನಪ್ಪಿದ ದುರ್ಘಟನೆ ಚೆರುವತ್ತೂರಿನಲ್ಲಿ‌ ನಡೆದಿದೆ.  ಅಸ್ಸಾಂ ಮೂಲದ ಬಿಲ್ ಹುಸೇನ್ (28) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಈತ ಹೊಟೇಲ್‌ನಲ್ಲಿ ಪರೋಟಾ ತಯಾರಕನಾಗಿದ್ದು ನಿನ್ನೆ ಅಪರಾಹ್ನ ಗ್ರೈಂಡರ್ ನಿಂದ ಶಾಕ್ ಸಂಭವಿಸಿದ್ದು ತಕ್ಷಣ ಹುಸೇನ್ ಅವರನ್ನು ಸಹೋದ್ಯೋಗಿಗಳು ಆಸ್ಪತ್ರೆಗೆ ಕರೆದೊಯ್ದರೂ ಪ್ರಾಣ ಉಳಿಸಲಾಗಿಲ್ಲ. ಮೃತದೇಹವನ್ನು ಪರಿಯಾರಂ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆ ಶವಾಗಾರಕ್ಕೆ ಸಾಗಿಸಲಾಗಿದೆ.

Post a Comment

0 Comments