Ticker

6/recent/ticker-posts

Ad Code

ಕಣಜ ಹುಳ ಕಡಿತ ಐದು ವಿದ್ಯಾರ್ಥಿಗಳಿಗೆ ಗಾಯ


 ಕಾಸರಗೋಡು : ತ್ರಿಕರಿಪುರ ಸಮೀಪದ ಉದಿನೂರಿನಲ್ಲಿ ಕಣಜ ಹುಳ ಕಡಿತದಿಂದ ಐವರು ವಿದ್ಯಾರ್ಥಿಗಳು ಗಾಯಗೊಂಡ ಘಟನೆ ನಡೆದಿದೆ. ಉದಿನೂರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಗಳಾದ ಶಿವನ್ಯಾ (15), ಸನ್ಮಯ (15), ಅತುಲ್ ಕೃಷ್ಣ (15), ಪ್ರಜುಲ್ (16) ಮತ್ತು ಕೆ.ಎಚ್.ನವೀನ್ (14) ಗಾಯಗೊಂಡಿದ್ದು, ತ್ರಿಕರಿಪುರ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಉದಿನೂರು ಸೆಂಟ್ರಲ್‌ನಲ್ಲಿರುವ ಖಾಸಗಿ ಟ್ಯೂಷನ್ ಸೆಂಟರ್‌ಗೆ ಬರುತ್ತಿದ್ದ ವಿದ್ಯಾರ್ಥಿಗಳ ಮೇಲೆ ಉದಿನೂರು ಬಳಿ  ಕಣಜದ ಹುಳಗಳ ಗುಂಪೊಂದು ದಾಳಿ ಮಾಡಿದೆ. ಈ ಸಂದರ್ಭ ನಗರ ಸಭಾ   ಅಧ್ಯಕ್ಷೆ ಪಿ.ಸಿ.ಸುಬೈದಾ ಅವರು ಸ್ಥಳೀಯರ ಸಹಕಾರದೊಂದಿಗೆ ಸ್ವತಃ ತನ್ನ ಪಂಚಾಯತ್ ಜೀಪಿನಲ್ಲಿಯೇ ಮಕ್ಕಳನ್ನು ಕೂಡಲೇ ತೃಕರಿಪುರ ತಾಲೂಕು ಆಸ್ಪತ್ರೆಗೆ ಕರೆತಂದು ಮಾನವೀಯತೆ ಮೆರೆದರು.

Post a Comment

0 Comments