Ticker

6/recent/ticker-posts

Ad Code

ಅಮೈ ಶ್ರೀ ಕೃಷ್ಣ ಭಜನಾ ಮಂದಿರ ರಜತ ಮಹೋತ್ಸವದ ಶ್ರೀ ಕೃಷ್ಣ ನಿಧಿ ಕೂಪನ್ ಬಿಡುಗಡೆ

 

ಕಾಸರಗೋಡು : ಶ್ರೀ ಕೃಷ್ಣ ಭಜನಾ ಮಂದಿರದ 25 ನೇ ವರ್ಷದ ವಾರ್ಷಿಕೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ತೀರ್ಮಾನಿಸಿದ ಪ್ರಕಾರ ಧನ ಸಂಗ್ರಹಣೆಗೆ ಶ್ರೀ ಕೃಷ್ಣ ನಿಧಿ ಲಕ್ಕಿ ಕೂಪನ್   ಬಿಡುಗಡೆಯನ್ನು ನಡೆಸಲಾಯಿತು. ಮಂದಿರದ ತಂತ್ರಿವರ್ಯ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಅಸ್ರ ಇವರ ದಿವ್ಯಹಸ್ತದಿಂದ ಸಮಿತಿಯ ಉಪಾಧ್ಯಕ್ಷರು ಹಾಗೂ ವೈದಿಕ ಸಮಿತಿ ಅಧ್ಯಕ್ಷರಾದ ಡಾl ಕೆ.ಎನ್. ವೆಂಕಟ್ರಮಣ ಹೊಳ್ಳ ಇವರಿಗೆ ಪ್ರಥಮ ಕೂಪನ್ ನೀಡಿ ನೆರವೇರಿಸಿದರು. ಸಮಾರಂಭದಲ್ಲಿ ರಜತ ಮಹೋತ್ಸವ ಸಮಿತಿಯ ಅಧ್ಯಕ್ಷ ಸದಾಶಿವ ಮಲ್ಯ, ಕೋಶಾಧಿಕಾರಿ  ವೇಣುಗೋಪಾಲ್, ಎ ಕೆ ವಿಜಯ ಕೋಕಿಲ, ರಾಮಕೃಷ್ಣ ಹೊಳ್ಳ, ಜಯರಾಮ್ ಶೆಟ್ಟಿ, ಕಿಶೋರ್ ಕುಮಾರ್, ಶ್ರೀಲತಾ ಟೀಚರ್, ಸೌದಾಮಿನಿ, ಸಮಿತಿಯ ಪದಾಧಿಕಾರಿಗಳು ಹಾಗೂ ಭಕ್ತ ಮಹಾಶಯರು ಸಭೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪ್ರದಾನ ಕಾರ್ಯದರ್ಶಿ ಗುಣಪಾಲ ಅಮೈ ಸ್ವಾಗತಿಸಿ, ಸುರೇಶ್ ಅಮೈ ವಂದಿಸಿದರು. ಸಾಂಸ್ಕ್ರತಿಕ ಕಾರ್ಯಕ್ರಮದ ಸಂಚಾಲಕ, ಕಾಸರಗೋಡು ನಗರಸಭಾ ಸದಸ್ಯ ರಾಜೇಶ್  ನಿರೂಪಿಸಿದರು.

Post a Comment

0 Comments