Ticker

6/recent/ticker-posts

Ad Code

ಜಿಲ್ಲಾ ಪಂ.ನೂತನ ಸಾರಥಿಗಳ ಪ್ರಮಾಣ ವಚನ ಸ್ವೀಕಾರ

 


ಕಾಸರಗೋಡು :  ಜಿಲ್ಲಾ ಪಂಚಾಯತ್‌ನ ಚುನಾಯಿತ ಪ್ರತಿನಿಧಿಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭವು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆಯಿತು. ಎಲ್ಲ ಪ್ರತಿನಿಧಿಗಳನ್ನು ಅಭಿನಂದಿಸಿದ ಜಿಲ್ಲಾಧಿಕಾರಿ ಕೆ.ಇಂಬಶೇಖರ್ ಅವರು ಚುನಾಯಿತ ಪ್ರತಿನಿಧಿಗಳ ಹಿರಿಯ ಸದಸ್ಯ ರಾಮಪ್ಪ ಮಂಜೇಶ್ವರ ಅವರಿಗೆ ಪ್ರಮಾಣ ವಚನ ಬೋಧಿಸಿದರು. 74 ವರ್ಷದ ರಾಮಪ್ಪ ಬದಿಯಡ್ಕ ಡಿವಿಶನ್ ನಿಂದ ಚುನಾಯಿತ ಸದಸ್ಯರಾಗಿದ್ದಾರೆ.

 


ರಾಮಪ್ಪ ಮಂಜೇಶ್ವರ ಅವರು ಇತರ ಜನ ಪ್ರತಿನಿಧಿಗಳಿಗೆ ಪ್ರಮಾಣ ವಚನ ಬೋಧಿಸಿದರು.    ವರ್ಕಾಡಿ ಡಿವಿಶನ್ ನ ಅಲಿ ಹರ್ಷಾದ್ ವರ್ಕಾಡಿ, ಪುತ್ತಿಗೆ  ಡಿವಿಶನ್ ನ  ಸೋಮಶೇಖರ್ ಜೆ.ಎಸ್,  ದೇಲಂಬಾಡಿ ಡಿವಿಶನ್ ನ .ವತ್ಸಲಾ, ಕುತ್ತಿಕೋಲ್ ಡಿವಿಶನ್ ನ ಸಾಬು ಅಬ್ರಹಾಂ, ಕಲ್ಲಾರ ಡಿವಿಶನ್ ನ ರೀನಾ ಥಾಮಸ್, ಚಿತ್ತಾರಿಕಲ್ಲು ಡಿವಿಶನ್ ನ ಬಿನ್ಸಿ ಜೈನ್, ಕೆಯ್ಯೂರು ಡಿವಿಶನ್ ನ ಕೆ.ಕೃಷ್ಣನ್ , ಪಿಲಿಕ್ಕೋಡು ಡಿವಿಶನ್ ನ ಎಂ.ಮನು,  ಡಾ.ಸೆರೇನಾ ಸಲಾಂ, ಮಡಿಕೈ ಡಿವಿಶನ್ ನ ಕೆ.ಸಬೀಶ್, ಪೆರಿಯ ಡಿವಿಶನ್ ನ ಕೆ.ಕೆ.ಜೋಯ್, ಬೇಕಲ ಡಿವಿಶನ್ ನ ಟಿ.ವಿ.ರಾಧಿಕಾ, ಉದುಮ ಡಿವಿಶನ್ ನ ಸುಕುಮಾರಿ ಶ್ರೀಧರನ್, ಚೆಂಗಳ ಡಿವಿಶನ್ ನ ಜಸ್ನಾ ಮನಾಫ್, ಸಿವಿಲ್ ಠಾಣೆ ಡಿವಿಶನ್ ನ ಪಿ.ಬಿ.ಶೆಫೀಕ್, ಕುಂಬಳೆ ಡಿವಿಶನ್ ನ ಅಸೀಸ್ ಕಳತ್ತೂರು, ಮಂಜೇಶ್ವರ ಡಿವಿಶನ್ ನ ಇರ್ಫಾನಾ ಇಕ್ಬಾಲ್ ಅವರು ಪ್ರಮಾಣ ವಚನ ಸ್ವೀಕರಿಸಿದ ಜಿ.ಪಂ. ನೂತನ ಸಾರಥಿಗಳಾಗಿದ್ದಾರೆ. 

 ಸಂಸದ ರಾಜಮೋಹನ್ ಉಣ್ಣಿತ್ತಾನ್, ಶಾಸಕರಾದ ಎನ್.ಎ.ನೆಲ್ಲಿಕುನ್, ನ್ಯಾಯವಾದಿ ಸಿ.ಎಚ್ ಕುಂಜಂಬು, ಎಂ ರಾಜಗೋಪಾಲನ್ ಮತ್ತು ಎಡಿಎಂಪಿ ಅಖಿಲ್, ಎಲ್‌ಎಸ್‌ಜಿಡಿ ಜಂಟಿ ನಿರ್ದೇಶಕ ಆರ್ ಶೈನಿ,

ಜಿಲ್ಲಾ ಪಂಚಾಯಿತಿ ಕಾರ್ಯದರ್ಶಿ ಎಸ್.ಬಿಜು, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಶಾನವಾಸ್ ಪಾದೂರು, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಗೂ ಅಭ್ಯರ್ಥಿಗಳ ಕುಟುಂಬಸ್ಥರು ಉಪಸ್ಥಿತರಿದ್ದರು.

Post a Comment

0 Comments