Ticker

6/recent/ticker-posts

Ad Code

ಗೆದ್ದ ಅಭ್ಯರ್ಥಿಯಿಂದ ಉದ್ದೇಶಪೂರ್ವಕವಾಗಿ ಧಾರ್ಮಿಕ ಹೆಸರು ಬಳಕೆ; ವಿಶ್ವಹಿಂದೂ ಪರಿಷತ್ತು ಖಂಡನೆ

 

ಕುಂಬ್ಡಾಜೆ : ಗ್ರಾಮ ಪಂಚಾಯತ್  ಚುನಾವಣೆಯಲ್ಲಿ ಉಬ್ರಂಗಳ 13ನೇ ವಾರ್ಡಿನಿಂದ ಐಕ್ಯರಂಗದ ಬೆಂಬಲಿತ ಕೊಡೆ ಚಿಹ್ನೆಯಿಂದ ಗೆದ್ದು ಜನಪ್ರತಿನಿಧಿಯಾದ ಬಳಿಕ ಉದ್ದೇಶಪೂರ್ವಕವಾಗಿ ಧಾರ್ಮಿಕ ಹೆಸರು ಬಳಕೆಗೆ ವಿಶ್ವಹಿಂದೂ ಪರಿಷತ್ತು ಕುಂಬ್ಡಾಜೆ  ಖಂಡ ಸಮಿತಿಯಿಂದ ಖಂಡಿಸಿದೆ.

ಕುಂಬ್ಡಾಜೆ ಪಂಚಾಯತಿನ 13ನೇ ವಾರ್ಡಿನಲ್ಲಿ ಚುನಾವಣೆಗೆ ಸ್ಪರ್ಧಿಸಿ ಗೆದ್ದ ಆಯಿಶತ್ ಮಾಶಿದ ಅಭಿನಂದನಾ ಪತ್ರಿಕೆಗಳಲ್ಲಿ ಹಿಂದೂ ಧಾರ್ಮಿಕ ಕ್ಷೇತ್ರದ ವಾರ್ಡಿನಿಂದ ಗೆದ್ದು ಬಂದೆ ಎಂಬ ಕುತ್ಸಿತ ಮನೋಭಾವದ ವಾಕ್ಯಗಳನ್ನು ಬರೆದಿದ್ದು ಇದು ಹಿಂದೂ ಭಾವನೆಗಳಿಗೆ ಸವಾಲೆಸೆದಂತಾಗಿದೆ ಎಂದು ವಿಶ್ವಹಿಂದೂ ಪರಿಷತ್ ಕುಂಬ್ಡಾಜೆ ಖಂಡ ಸಮಿತಿ ಖಂಡಿಸಿದೆ. ಇಲ್ಲಿನ ವಾರ್ಡ್ ಗೊಳಪಡುವ ಇತಿಹಾಸ ಪ್ರಸಿದ್ಧ ಬಡಗು ಶಬರಿಮಲೆ ಎಂದೇ ಪ್ರಸಿದ್ಧವಾದ ಶ್ರೀ ಮಹಾದೇವ ಶಾಸ್ತಾರ ಪಾರ್ವತಿ ಕ್ಷೇತ್ರ ಹಾಗೂ ಅಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವರಿ ಕ್ಷೇತ್ರವನ್ನು ಮಾತ್ರ ಉಲ್ಲೇಖಿಸಲಾಗಿದ್ದು ಇದು ಹಿಂದೂ ಭಾವನೆಗೆ ಕೋಮುವಾದ ಸೃಷ್ಠಿಸುವಂತಾಗಿದೆ ಎಂದು ವಿಹಿಂಪ.ಅಭಿಪ್ರಾಯಪಟ್ಟಿದೆ. ಈ ಕ್ಷೇತ್ರಗಳ ವಾರ್ಡಿನಲ್ಲಿಯೇ ಮುಸ್ಲಿಂ ಬಾಂಧವರ ಮಸೀದಿ ಒಳಗೊಂಡಿದ್ದರೂ ಅದನ್ನು ಉಲ್ಲೇಖದಲ್ಲಿ ಕೈ ಬಿಟ್ಟಿದ್ದು  ಸೌಹಾರ್ದದಲ್ಲಿ ಬದುಕುವ ನಾಡಿನಲ್ಲಿ ಕೋಮು ಭಾವನೆಯನ್ನು ಕೆರಳಿಸಿದಂತಾಗಿದೆ ಇದು ಯಾರ ಪ್ರಚೋದಿತ ಕೃತ್ಯವೆಂದು ಮನಗಾಣಬೇಕೆಂದು ವಿ.ಹಿಂ.ಪ ಒತ್ತಾಯಿಸಿದೆ.

Post a Comment

0 Comments