Ticker

6/recent/ticker-posts

Ad Code

ಧಾರ್ಮಿಕ ಯುವ ಮುಂದಾಳು ಹೃದಯಾಘಾತದಿಂದ ನಿಧನ : ನಾಡಿನಲ್ಲಿ ಶೋಕ ಸಾಗರ

 

ಮಂಜೇಶ್ವರ : ಧಾರ್ಮಿಕ ಯುವ ಮುಂದಾಳು ನವೀನ್ ಮದಂಗಲ್ಲು  (40) ಹೃದಯಾಘಾತದಿಂದ ಇಂದು ಮಧ್ಯಾಹ್ನ ನಿಧನರಾದರು. ಮೀಯಪದವು ಶ್ರೀ ಅಯ್ಯಪ್ಪ ಭಜನಾ ಮಂದಿರದ ಸಕ್ರಿಯ ಕಾರ್ಯಕರ್ತರಾಗಿದ್ದ ಇವರು ಈ ಪರಿಸರದಲ್ಲಿ ಇರುವ ಯಾವುದೇ ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಕ್ರಿಯಾಶೀಲರಾಗಿದ್ದವರು. ಮೃತರು ತಂದೆ ಕೃಷ್ಣ ಮೂಲ್ಯ, ತಾಯಿ ದೇವಕಿ, ಪತ್ನಿ ಶಿಲ್ಪ, ಇಬ್ಬರು ಮಕ್ಕಳು, ಸಹೋದರ ಜಯಂತ, ಸಹೋದರಿ ಸವಿತ ಹಾಗೂ ಅಪಾರ ಬಂಧುಬಳಗವನ್ನಗಲಿದ್ದಾರೆ. ಇವರ ಆಕಸ್ಮಿಕ ನಿಧನದಿಂದ ನಾಡು ಶೋಕಮುಖವಾಗಿದೆ.

Post a Comment

0 Comments