ಬದಿಯಡ್ಕ: ಚೇರ್ಕೂಡ್ಲು ಶಿವರಾಮ ಮಣಿಯಾಣಿ (67) ನಿಧನರಾದರು. ಕೇರಳ ಗ್ರಾಮೀಣ ಬ್ಯಾಂಕ್ನ ನಿವೃತ್ತ ಪ್ರಬಂಧಕರಾಗಿದ್ದ ಅವರು ಸಾಮಾಜಿಕವಾಗಿ ಗುರುತಿಸಿಕೊಂಡಿದ್ದರು. ಮೃತರ ಪತ್ನಿ ನಳಿನಾಕ್ಷಿ ಈ ಹಿಂದೆಯೇ ದಿವಂಗತರಾಗಿದ್ದಾರೆ. ಮಕ್ಕಳಾದ ಡಾ.ಶೈನಾ ರಾಜೇಶ್, ಡಾ.ಅನುರಾಧ, ಸೂರ್ಯನಾರಾಯಣ (ಇಂಜಿನಿಯರ್, ಬೆಂಗಳೂರು). ಅಳಿಯಂದಿರಾದ ರಾಜೇಶ್ ಅಗಲ್ಪಾಡಿ (ಶಿಕ್ಷಕರು, ನವಜೀವನ ಹೈಯರ್ ಸೆಕೆಂಡರಿ ಶಾಲೆ, ಪೆರಡಾಲ), ಅಶ್ವತ್ಥ್ ಅಲೆಟ್ಟಿ (ಇಂಜಿನಿಯರ್, ಬೆಂಗಳೂರು). ಸಹೋದರರಾದ ಕೇಳು ಮಣಿಯಾಣಿ, ಕುಂಞಂಬು, ಶ್ರೀದೇವಿ, ಗೋಪಿ, ಲಕ್ಷ್ಮಿ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

0 Comments