Ticker

6/recent/ticker-posts

Ad Code

ಧ.ಗ್ರಾ. ಯೋಜನೆಯ ಕಾಸರಗೋಡು ವಲಯದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭೆ

 

ಕಾಸರಗೋಡು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ,  ಬಿ ಸಿ ಟ್ರಸ್ಟ್  ಕಾಸರಗೋಡು ವಲಯ, ಕುತ್ಯಾಳ ಶ್ರೀ ನವಜೀವನ ಸಮಿತಿ ಕೂಡ್ಲು, ಶೌರ್ಯ ವಿಪತ್ತು ನಿರ್ವಹಣಾ ಘಟಕ ಮಧೂರು ವತಿಯಿಂದ  ಸಾಮೂಹಿಕ  ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ಜರಗಿತು.  ಶ್ರೀ ಮಹಾದೇವ ಶಾಸ್ತ್ರ ವಿನಾಯಕ  ದೇವಸ್ಥಾನ ಪರಕ್ಕಿಲದಲ್ಲಿ ನಡೆದ ಕಾರ್ಯಕ್ರಮವನ್ನು ಬ್ರಹ್ಮಶ್ರೀ ಉಳಿಯತ್ತಾಯ  ವಿಷ್ಣು ಅಸ್ರ  ತಂತ್ರಿಯವರು ಕಲಶಕ್ಕೆ ಭತ್ತವನ್ನು  ತುಂಬಿಸುತ್ತಾ ಚಾಲನೆಯನ್ನು ನೀಡಿದರು. ಬಳಿಕ ಮಾತನಾಡುತ್ತಾ ಧರ್ಮಸ್ಥಳ ಸಂಘಟನೆಯು   ಜನರಿಗೆ ಅನೇಕ ಉಪಯೋಗಗಳನ್ನು ತಂದು ಕೊಟ್ಟಿದೆ. ಧರ್ಮಸ್ಥಳದಿಂದ   ಹರಿದು ಬಂದ ಹಣ ಹೇಗೆ ವಿನಿಯೋಗ ಆಗಿದೆ ಎಂದು ಇಲ್ಲಿಯ ಕಾರ್ಯಕ್ರಮಗಳನ್ನು ನೋಡಿಕೊಂಡರೆ ಗೊತ್ತಾಗುತ್ತದೆ. ದಾಖಲೆ ಪಡೆದು ಸಾಧನೆ ಗಣನೀಯವಾಗಿದೆ. ಜನಪರರಿಗೆ ಅನೇಕ ರೀತಿಯ ಬದುಕು ಕಟ್ಟಿಕೊಟ್ಟಿದ್ದಾರೆ ನಮ್ಮ ವೀರೇಂದ್ರ ಹೆಗ್ಗಡೆಯವರ ಬಗ್ಗೆ ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡಿದ್ದು ಆದರೆ ಸತ್ಯಮೇವ ಜಯತೆ ಎಂಬ ಮಾತಿನಂತೆ ಸ್ವಾಮಿಯು ಕಾಪಾಡಿದ್ದಾನೆ. ಮದ್ಯವರ್ಜನಾ ಶಿಬಿರ ಅನೇಕ ಜನರಿಗೆ ಉಪಯೋಗವಾಗಿದೆ ಒಳ್ಳೆಯದಕ್ಕು, ನಾಶಕ್ಕೂ ಮನಸ್ಸು ಕಾರಣ. ನಮ್ಮ ಮನಸ್ಸು ಭಗವಂತನಿಗೆ ನೀಡಬೇಕು. ಅವನು ದಾರಿ ಸರಿಪಡಿಸುತ್ತಾನೆ. ನಾನು ನನ್ನದು ಅಹಂ ಎಂದು ಮನಸ್ಸಿನಲ್ಲಿ ಬಂದರೆ ಅವನು ಹಾಳಾಗುತ್ತಾನೆ ಮಂಜುನಾಥ ಸ್ವಾಮಿ ಮಾತಿನ ಒಡೆಯ ಅವರ ಮಾರ್ಗದರ್ಶನದಲ್ಲಿ ಸಂಘಟನೆ ಇನ್ನೂ ಅನೇಕ ರೀತಿಯಲ್ಲಿ ಮುಂದುವರೆಯಲಿ. ಎಲ್ಲರಿಗೂ ಕೆಲಸ ಮಾಡುವ ಶಕ್ತಿ ಆ ಮಂಜುನಾಥ ಸ್ವಾಮಿ ಅನುಗ್ರಹಿಸಲಿ ಎಂದು ಹಾರೈಸಿದರು. ಶ್ರೀ. ಕ್ಷೇ. ಧ. ಗ್ರಾ. ಯೋ. ದ. ಕ.ಜಿಲ್ಲಾ ನಿರ್ದೇಶಕರಾದ ಬಾಬು ನಾಯ್ಕರವರು 43 ವರ್ಷದ ಹಿಂದೆ ಪ್ರಾರಂಭವಾದ ಯೋಜನೆಯು  ಈ ತಾಲೂಕಿಗೆ ಬಂದು 13 ವರ್ಷ ಆಯ್ತು.  ಇಲ್ಲಿ ಅನೇಕ ಸಾಧನೆಗಳೊಂದಿಗೆ ಮುಂದುವರೆದಿದೆ ಮಹಾತ್ಮ ಗಾಂಧಿ ಕಂಡ ಕನಸು ನನಸು ಮಾಡಬೇಕು ಎಂದರೆ ಒಂದು ಕುಟುಂಬ ಅಭಿವೃದ್ಧಿಯಾಗಬೇಕು. ಕುಟುಂಬ ಅಭಿವೃದ್ಧಿ ಆದರೆ ಒಂದು ಗ್ರಾಮ ಅಭಿವೃದ್ಧಿಯಾಗುವದು. ಗ್ರಾಮದ ಅಭಿವೃದ್ಧಿಯಿಂದ  ಜಿಲ್ಲೆ, ಜಿಲ್ಲೆಯ ಅಭಿವೃದ್ಧಿಯಿಂದ  ರಾಜ್ಯ ಅಭಿವೃದ್ಧಿಯಾಗುವದು.  ಇಲ್ಲಿಯ ನವಜೀವನ  ಸಮಿತಿ ರಾಜ್ಯದಲ್ಲಿ ಗುರುತಿಸಿಕೊಂಡಿದೆ. ಮಧ್ಯವರ್ಜನ ಶಿಬಿರ ಅನೇಕ ಕುಟುಂಬಗಳನ್ನು ಸರಿಪಡಿಸಿದೆ ಎಂದು ತಿಳಿಸಿದರು. ಡಾ l ಕೆ.ಎನ್.ವೆಂಕಟ್ರಮಣ ಹೊಳ್ಳರವರು ಡಾl ವೀರೇಂದ್ರ ಹೆಗ್ಗಡೆಯವರ ಭಕ್ತಿ ಸರಳತೆ ಬಗ್ಗೆ ಮಾಹಿತಿ ನೀಡಿದರು. ಮಧೂರು ಶಾಲೆಯ ಮುಖ್ಯೋಪಾಧ್ಯಾಯರು ನನಗೆ ಈ ವೇದಿಕೆ ಅವಕಾಶ ಕೊಟ್ಟಿದೆ. ಅನೇಕ ವಿಷಯಗಳನ್ನು ತಿಳಿದುಕೊಳ್ಳಲು ಕಲಿಯಲು ಪ್ರಯೋಜನವಾಗಿದೆ. ಜ್ಞಾನೇಶ ಆಚಾರ್ಯ ಒಕ್ಕೂಟವು ಒಳ್ಳೆಯ ರೀತಿ ನಡೆದುಕೊಂಡು ಬಂದ ಕಾರಣ ನಮಗೆ ಸಿಕ್ಕಿದ ಗೌರವ ಪ್ರತಿ ಖುಷಿ ಉಂಟು ಮಾಡಿದೆ ಅದೇ ರೀತಿ ನನಗೆ ಅವಕಾಶವನ್ನು ಕೊಟ್ಟಿದೆ. ಈ ವೇದಿಕೆ ನಾವು ಒಳ್ಳೆಯ ಮನಸ್ಸಿನಲ್ಲಿ ನಡೆದುಕೊಂಡು ಬಂದರೆ ಇನ್ನೂ ಸಂಘಟನೆಯಲ್ಲಿ ಮುಂದುವರೆಯಲು ಅವಕಾಶ ಸಿಗುವುದು ಎಂದು ತಿಳಿಸಿದರು. ಜಯಾನಂದ ಹೊಸದುರ್ಗ ಅವರು ಭಜನೆಯು ನಮ್ಮ ಏಕಾಗ್ರತೆಯನ್ನು ಒಂದು ಮಾಡುತ್ತದೆ ಸುಖವನ್ನು ನೀಡಿ ಕಷ್ಟವನ್ನು ದೂರ ಮಾಡಲಿ ಎಲ್ಲದಕ್ಕೂ ದೇವರನ್ನ ಕರೆಯುತ್ತೇವೆ.  ನಮ್ಮ ಮನಸ್ಸು ಕನ್ನಡಿ ಇದ್ದಹಾಗೆ ಆ ಮನಸ್ಸು ಹೊರ ಹಾಕಿದರೆ ಉತ್ತಮವಾದ ಬಾಂಧವ್ಯ, ಉತ್ತಮವಾದ ವ್ಯಕ್ತಿತ್ವ, ಉತ್ತಮವಾದ ಸಂಪರ್ಕ, ಉತ್ತಮವಾದ ವಿಷಯ, ಚಿಂತನೆಗಳು,  ದೇವರ ದರ್ಶನ ನಮ್ಮ ಮನಸ್ಸನ್ನು ಉತ್ತಮವಾಗಿಸಲು ದಾರಿ ಮಾಡಿಕೊಡುತ್ತದೆ ಎಂದು ಹಾರೈಸಿದರು. ವೇದಿಕೆಯಲ್ಲಿ ಯೋಜನಾಧಿಕಾರಿ ದಿನೇಶ್, ಮೇಲ್ವಿಚಾರಕರಾದ  ಗೋಪಾಲಕೃಷ್ಣ ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಜ್ಞಾನ ವಿಕಾಸ ಸಮನ್ವಧಿಕಾರಿ  ಸೌಮ್ಯ ಹಾಗೂ  ಪ್ರಶಾಂತಿ ನೆರವೇರಿಸಿದರು. ಮೀರಾ ಸ್ವಾಗತಿಸಿ, ಶೋಭಾ ವಂದಿಸಿದರು.

Post a Comment

0 Comments