Ticker

6/recent/ticker-posts

Ad Code

ಜಾಂಬ್ರಿ ಗುಹಾ ಪರಿಸರದಲ್ಲಿ ಬೆಂಕಿ ಆಕಸ್ಮಿಕ : ಪುತ್ತೂರು ಅಗ್ನಿಶಾಮಕ ದಳದಿಂದ ಶಮನ


ಪಾಣಾಜೆ: ಇತಿಹಾಸ ಪ್ರಸಿದ್ಧ ಜಾಂಬ್ರಿ ಗುಹಾ ಪ್ರದೇಶ, ಕರ್ನಾಟಕದ ಬಂಟಾಜೆ ಹಾಗೂ ಕೇರಳದ ಪರಪ್ಪ ರೇಂಜ್ ನೆಟ್ಟಣಿಗೆ ಬೀಟ್ ವ್ಯಾಪ್ತಿಯ ರಕ್ಷಿತಾರಣ್ಯ ಚೆಂಡೆತ್ತಡ್ಕ ಬಯಲಿನಲ್ಲಿ ಮಂಗಳವಾರ ಸಂಜೆ ಬೆಂಕಿ ಅನಾಹುತ ಸಂಭವಿಸಿದೆ. ಸಂಜೆ 4ರ ವೇಳೆ ಬೆಂಕಿ ಕಾಣಿಸಿದ್ದು ಒಣ ಹುಲ್ಲು ಹೊತ್ತಿ ಉರಿದಿದೆ. 

ಸ್ಥಳೀಯರು ನೀಡಿದ ಮಾಹಿತಿಯಂತೆ ಪುತ್ತೂರಿನ ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸಿದ್ದಾರೆ‌.‌ ಸ್ಥಳೀಯರು ಸಹಕರಿಸಿದ್ದಾರೆ. ಚೆಂಡೆತ್ತಡ್ಕ ಬಯಲಿನ ಕೇರಳ ರಾಜ್ಯ ವ್ಯಾಪ್ತಿಯಲ್ಲಿ ಬೆಂಕಿ ಕಾಣಿಸಿದ್ದಾಗಿ ಸ್ಥಳೀಯರು ತಿಳಿಸಿದ್ದಾರೆ. ಮರ ಗಿಡಗಳಿಗೆ ವ್ಯಾಪಿಸುವ ಮುನ್ನ ಬೆಂಕಿ ನಂದಿಸಲಾಗಿದ್ದು ಹೆಚ್ಚಿನ ಅನಾಹುತ, ನಾಶ ನಷ್ಟ ಸಂಭವಿಸಿಲ್ಲ.

Post a Comment

0 Comments