ಪತ್ತನಂತಿಟ್ಟ : ಶಬರಿಮಲೆ ದರ್ಶನ ಸೌಭಾಗ್ಯ ಎಷ್ಟೋ ವರ್ಷಗಳ ಪುಣ್ಯದ ಫಲ ಎಂಬುದು ನಂಬಿಕೆ. ಎಷ್ಟೇ ಹಣ ಆಸ್ತಿಗಳಿದ್ದರೂ ಅಯ್ಯಪ್ಪನ ದರುಶನ ಜನುಮ ಸಾರ್ಥಕತೆಯ ಫಲ ನೀಡುತ್ತದೆ. ಆದ್ದರಿಂದಲೇ ನಾಡಿನ ನಾನಾ ಕಡೆಯ ಸಹಸ್ರ ಭಕ್ತ ಜನರು ಶಬರಿಮಲೆಯೆಡೆಗೆ ಹರಿದು ಬರುತ್ತಿದ್ದಾರೆ. ಈ ಬಾರಿಯೂ ತಮ್ಮ 102ನೇ ವಯಸ್ಸಿನಲ್ಲಿ ಶತಾಯುಷಿ ಪಾರುಕುಟ್ಟಿ ಅಮ್ಮ ತಮ್ಮ ಕುಟುಂಬದವರೊಡನೆ ಹದಿನೆಂಟು ಮೆಟ್ಟಿಲುಗಳನ್ನೇರಿ ಶಬರಿ ಮಲೆ ದರುಶನದ ಫಲ ಗಿಟ್ಟಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಮೂಲತಃ ವಯನಾಡಿನವರಾದ ಪಾರುಕುಟ್ಟಿ ಅಮ್ಮ ವಯಸ್ಸಿನ ಹೊರತಾಗಿಯೂ, ಅಯ್ಯಪ್ಪ ದೇವರ ಆಶೀರ್ವಾದ ಪಡೆಯಲು ಕಡಿದಾದ 18 ಪವಿತ್ರ ಮೆಟ್ಟಿಲುಗಳನ್ನು (ಪತಿನೆಟ್ಟಂಪಾಡಿ) ಹತ್ತುವುದರ ಮೂಲಕ ಅಪಾರ ಭಕ್ತಿಯನ್ನು ಮೆರೆದರು. ಅವರ ಜೊತೆ ಕುಟುಂಬದ 12 ಸದಸ್ಯರು ಇದ್ದರು ಮತ್ತು ಅವರ ಸ್ಪೂರ್ತಿದಾಯಕ ಪ್ರಯಾಣದ ಸಮಯದಲ್ಲಿ ಭದ್ರತಾ ಸಿಬ್ಬಂದಿ ಸಹಾಯ ಮಾಡಿದರು.
.jpeg)
0 Comments