Ticker

6/recent/ticker-posts

Ad Code

ಕುಂಬಳೆ, ಮಂಜೇಶ್ವರ ಭಾಗದ ವಿದ್ಯಾರ್ಥಿಗಳಿಗೆ ಮಾರಾಟ ಮಾಡಲು ತರುತ್ತಿದ್ದ ಗಾಂಜಾ ಪ್ಯಾಕೇಟ್ ಸಹಿತ ಯುಪಿ ನಿವಾಸಿ ಸೆರೆ

 

ಮಂಜೇಶ್ವರ: ಮಂಜೇಶ್ವರ ಚೆಕ್‌ಪೋಸ್ಟ್‌ನಲ್ಲಿಅಬಕಾರಿ ಇಲಾಖೆಯ ವಿಶೇಷ ಕಾರ್ಯಾಚರಣೆಯ ವೇಳೆ   ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಗಾಂಜಾ ಕಳ್ಳಸಾಗಣೆ ಮಾಡುತ್ತಿದ್ದ ಯುವಕನನ್ನು ಬಂಧಿಸಲಾಗಿದೆ. ಉತ್ತರ ಪ್ರದೇಶದ ಮೊರಾದಾಬಾದ್‌ನ ಮಹಾಲಕ್‌ಪುರ್ ಮಾಫಿ ಮೂಲದ ನಜೀರ್ (35) ಬಂಧಿತ ಆರೋಪಿ. ಇಂದು ಪೂರ್ವಾಹ್ನ ಮಂಜೇಶ್ವರ ಅಬಕಾರಿ ಚೆಕ್‌ಪೋಸ್ಟ್‌ನಲ್ಲಿ ಇನ್ಸ್‌ಪೆಕ್ಟರ್ ಸಂತೋಷ್ ಕುಮಾರ್ ಮತ್ತು ಅವರ ತಂಡ ನಡೆಸಿದ ದಾಳಿಯಲ್ಲಿ ಗಾಂಜಾ ಕಳ್ಳಸಾಗಾಗಾರ ಸಿಕ್ಕಿಬಿದ್ದಿದ್ದಾನೆ. ಮಂಜೇಶ್ವರ ಹಾಗೂ ಕುಂಬಳೆ  ಭಾಗದ ಯುವಕರು ಮತ್ತು ಪ್ಲಸ್ ಟು ವಿದ್ಯಾರ್ಥಿಗಳಿಗೆ ನೀಡಲು ಸಣ್ಣ ಪ್ಯಾಕೆಟ್‌ಗಳಲ್ಲಿ ಗಾಂಜಾವನ್ನು ಪ್ಯಾಕ್ ಮಾಡಲಾಗಿತ್ತು ಎನ್ನಲಾಗಿದೆ. ಈ ಸಂದರ್ಭದಲ್ಲಿ ಅಬಕಾರಿ ಅಧಿಕಾರಿಗಳಾದ ಒ ಪಿ ರತೀಶ್ ಮತ್ತು ಎ ವಿ ಪ್ರಶಾಂತ್ ಕುಮಾರ್, ಪ್ರಿವೆಂಟಿವ್ ಆಫೀಸರ್ (ಗ್ರೇಡ್) ಕೆ ನೌಶಾದ್ ಮತ್ತು ಸಹಾಯಕ ಅಬಕಾರಿ ಇನ್ಸ್‌ಪೆಕ್ಟರ್ (ಗ್ರೇಡ್) ಕೆ ಎ ಜನಾರ್ದನನ್ ಭಾಗಿಯಾಗಿದ್ದರು.

Post a Comment

0 Comments