Ticker

6/recent/ticker-posts

Ad Code

ಕೌನ್ಸೆಲಿಂಗ್ ವೇಳೆ ಬೆಳಕಿಗೆ ಬಂದ ಪ್ರಕರಣ : ಆಸ್ಪತ್ರೆಗೆ ಬಂದ ವಿಕಲಚೇತನ ಬಾಲಕಿಗೆ ಸೆಕ್ಯೂರಿಟಿ ಗಾರ್ಡ್ ನಿಂದ ಕಿರುಕುಳ ದೂರು


ಕಣ್ಣೂರು : ಚಿಕಿತ್ಸೆ ಪಡೆಯಲೆಂದು ಸರಕಾರಿ ಆಸ್ಪತ್ರೆಗೆ ಆಗಮಿಸಿದ ಅಪ್ರಾಪ್ತ ಬಾಲಕಿಗೆ ಅಲ್ಲಿನ ಸೆಕ್ಯೂರಿಟಿ ಗಾರ್ಡ್  ಕಿರುಕುಳ ನೀಡಲು ಯತ್ನಿಸಿದ ಪ್ರಕರಣ ತಳಿಪರಂಬ ತಾಲೂಕು ಸರಕಾರಿ  ಆಸ್ಪತ್ರೆಯಲ್ಲಿ ನಡೆದಿದೆ. ಇಲ್ಲಿನ  ಭದ್ರತಾ ನೌಕರ ಪಯ್ಯವೂರು ನಿವಾಸಿ ಪ್ರದೀಪ್ ಕುಮಾರ್ ವಿರುದ್ಧ ಪ್ರಕರಣ ದಾಖಲಾಗಿದೆ. ಡಿ.22 ರಂದು ಪ್ರಕರಣಕ್ಕೆ ಸಂಬಂಧಿಸಿದ ಘಟನೆ ನಡೆದಿದ್ದು, ವಿಕಲಚೇತನ ಬಾಲಕಿಯೋರ್ವೆ ತನ್ನ ತಾಯಿಯ ಜತೆ ಕೌನ್ಸಿಲಿಂಗ್ ಗಾಗಿ ಆಸ್ಪತ್ರೆಗೆ ಬಂದಿದ್ದಳು. ತಾಯಿ ಕೌನ್ಸೆಲಿಂಗ್ ಕೊಠಡಿಗೆ ಪ್ರವೇಶಿಸಿದಾಗ ಭದ್ರತಾ ಸಿಬ್ಬಂದಿ ಆಕೆಯ ದೇಹವನ್ನು ಸ್ಪರ್ಶಿಸಿದ್ದಾನೆ ಎಂಬುದಾಗಿ ದೂರಲಾಗಿದೆ. ಕೌನ್ಸೆಲಿಂಗ್ ವೇಳೆ ಬಾಲಕಿ ಇದನ್ನು ಸಂಬಂಧಪಟ್ಟವರಲ್ಲಿ ತಿಳಿಸಿದ್ದು,  ಬಳಿಕ  ಪೊಲೀಸರಿಗೆ ದೂರು ನೀಡಲಾಗಿತ್ತು. ಘಟನೆ ನಡೆದ ಮರುದಿನದಿಂದ ಪ್ರದೀಪ್ ಕುಮಾರ್ ತಲೆಮರೆಸಿಕೊಂಡಿದ್ದು ಇಂದು ಬೆಳಗ್ಗೆ  ಎಸ್‌ಐ ದಿನೇಶ ಕೊತೇರಿ ನೇತೃತ್ವದಲ್ಲಿ ಆರೋಪಿಯನ್ನು ವಶಕ್ಕೆ ಪಡೆಯಲಾಯಿತು. ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯಲು ಸಿದ್ಧತೆ ನಡೆಸುತ್ತಿದ್ದಾಗ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದ್ದು ಪ್ರದೀಪ್ ಕುಮಾರ್ ಪೊಲೀಸ್ ಕಸ್ಟಡಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Post a Comment

0 Comments