Ticker

6/recent/ticker-posts

Ad Code

ಜ.3ಕ್ಕೆ ದೇವಂದಪಡ್ಪುನಲ್ಲಿ ಅಯ್ಯಪ್ಪ ದೀಪೋತ್ಸವ


 ಮಂಜೇಶ್ವರ : ವರ್ಕಾಡಿ ಸಮೀಪದ ಶ್ರೀ ಮಹಾವಿಷ್ಣು ದೇವಸ್ಥಾನ ದೇವಂದಪಡ್ಪು  ಇವರ ಆಶ್ರಯದಲ್ಲಿ ಜನವರಿ  3 ಶನಿವಾರದಂದು ಶ್ರೀ ಮಹಾವಿಷ್ಣು ದೇವಸ್ಥಾನ ದೇವಂದಪಡ್ಪು ಇದರ ವಠಾರದಲ್ಲಿ  ಶ್ರೀ ರಂಜಿತ್ ಗುರುಸ್ವಾಮಿ ಅಯ್ಯಪ್ಪ ಭಜನಾ ಮಂದಿರ ಮೀಯಪದವು ಇವರ ನೇತೃತ್ವದಲ್ಲಿ ಅಯ್ಯಪ್ಪ ದೀಪೋತ್ಸವ ನಡೆಯಲಿದೆ.  ಕಾರ್ಯಕ್ರಮದಂಗವಾಗಿ ಅಂದು ಬೆಳಿಗ್ಗೆ ಗಂಟೆ 5.30ಕ್ಕೆ ಗಣಹೋಮ, ದೇವತಾ ಸ್ಥಾಪನೆ,ಬೆಳಿಗ್ಗೆ ಗಂಟೆ 10ರಿಂದ ಸಂಜೆ 6ರ ತನಕ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ, ಮಧ್ಯಾಹ್ನ ಗಂಟೆ 12.30ಕ್ಕೆ ಮಹಾಪೂಜೆ, ಮಧ್ಯಾಹ್ನ ಗಂಟೆ 1.00 ಕ್ಕೆ ಅನ್ನಸಂತರ್ಪಣೆ, ಸಂಜೆ ಗಂಟೆ 6.30ಕ್ಕೆ  ಶ್ರೀಕೃಷ್ಣ ಭಜನಾ ಮಂದಿರ ಕೃಷ್ಣ ನಗರ ನೆತ್ತಿಲಪದವು ಇಲ್ಲಿಂದ ಅಯ್ಯಪ್ಪ ದೇವರ ದೀಪೋತ್ಸವದ ಅಂಗವಾಗಿ ತಾಲಪ್ಪೊಲಿ ಶೋಭಯಾತ್ರೆ ರಾತ್ರಿ ಗಂಟೆ 9ಕ್ಕೆ  ಮಹಾಪೂಜೆ, 10ಕ್ಕೆ ಅನ್ನಸಂತರ್ಪಣೆ, ರಾತ್ರಿ ಗಂಟೆ 10.30 ರಿಂದ ತಾಯಂಬಕ ವಾದನ, 11ಕ್ಕೆ : ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಸುಬ್ರಹ್ಮಣ್ಯ ದ.ಕ ಇವರಿಂದ ಶ್ರೀ ಶಬರಿಮಲೆ ಅಯ್ಯಪ್ಪ ಯಕ್ಷಗಾನ ಬಯಲಾಟ ಜರಗಲಿದೆ.

Post a Comment

0 Comments