Ticker

6/recent/ticker-posts

Ad Code

ಕುಂಬ್ಡಾಜೆಯಲ್ಲಿ ಸತತ ಹತ್ತು ವರ್ಷಗಳ‌ ಬಳಿಕ ಬಿಜೆಪಿ ನೇತೃತ್ವದ ಆಡಳಿತ


 ಕುಂಬ್ಡಾಜೆ  :ಕುಂಬ್ಡಾಜೆ ಪಂಚಾಯತ್‌ನಲ್ಲಿ  ಯುಡಿಎಫ್‌ನಿಂದ ಅಧಿಕಾರವನ್ನು ಕಸಿದುಕೊಂಡ ಬಿಜೆಪಿ ಆಡಳಿತಕ್ಕೇರಿದೆ. ಎಂ. ಯಶೋಧ ಅಧ್ಯಕ್ಷರಾಗಿ ಮತ್ತು ರವೀಂದ್ರ ರೈ ಗೋಸಾಡ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಬಿಜೆಪಿ ಏಳು ಮತಗಳನ್ನು ಪಡೆದರೆ, ಯುಡಿಎಫ್ ಆರು ಮತಗಳನ್ನು ಪಡೆಯಿತು. ಸಿಪಿಎಂನ ಒಬ್ಬ ಸದಸ್ಯರು ದೂರ ಉಳಿದಿದ್ದರು. ಈ ಹಿಂದೆ ಬಿಜೆಪಿಯ ಶಕ್ತಿ ಕೇಂದ್ರವಾಗಿದ್ದ ಕುಂಬ್ಡಾಜೆ ಪಂಚಾಯತಿನಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಐಕ್ಯರಂಗ ಆಡಳಿತೆ ನಡೆಸಿತ್ತು. ಇದೀಗ ಅಧಿಕಾರವನ್ನು ಪುನಃ ಸ್ಥಾಪಿಸುವ ಮೂಲಕ ಬಿಜೆಪಿ ಬಲ ವರ್ಧನೆಯನ್ನು ತೋರ್ಪಡಿಸಿದೆ.  ಅಧ್ಯಕ್ಷೆಯಾಗಿ ಆಯ್ಕೆಯಾದ ಎಂ. ಯಶೋಧ 2010ರಿಂದ 2020ರ ತನಕ ಪಂಚಾಯತ್ ಸದಸ್ಯೆಯಾಗಿದ್ದು ಬಳಿಕ 2020ರಿಂದ 2025ರ ತನಕ ಕಾರಡ್ಕ ಬ್ಲೋಕ್ ಪಂಚಾಯತು ಸದಸ್ಯೆಯಾಗಿ ಸೇವೆ ಸಲ್ಲಿಸಿದ ಜನಾನುರಾಗಿ ವ್ಯಕ್ತಿತ್ವ, ಉಪಾಧ್ಯಕ್ಷರಾದ  ರವೀಂದ್ರ ರೈ ಗೋಸಾಡ 2000ದಿಂದ  2010ರ ವರೆಗೆ ಎರಡು ಅವಧಿಯಲ್ಲಿ ಪಂಚಾಯತು ಸದಸ್ಯರಾಗಿ ಚುನಾಯಿತರಾಗಿದ್ದರು. ಇದೀಗ ಮೂರನೇ ಅವಧಿಗೆ ಚುನಾಯಿತರಾಗಿದ್ದಾರೆ. ಹೀಗೆ ಸಾರ್ವಜನಿಕ ಕೆಲಸ ಕಾರ್ಯಗಳಲ್ಲಿ ಪರಿಣತಿ ಗಳಿಸಿದ ಅನುಭವ ಸಂಪನ್ನರನ್ನೆ ಅಧ್ಯಕ್ಷ ಪದವಿಗೇರಿಸುವ ಮೂಲಕ ಬಿಜೆಪಿ ಸಮರ್ಥ ಅಧಿಕಾರವನ್ನು ವಹಿಸಿಕೊಂಡಿದೆ. ಚುನಾಯಿತ ಜನಪ್ರತಿನಿಧಿಗಳನ್ನು ಹಾಗೂ ದುಡಿದ ಕಾರ್ಯಕರ್ತರನ್ನು ಬಿಜೆಪಿ ಕುಂಬ್ಡಾಜೆ ಪಂಚಾಯತು ಸಮಿತಿ ಅಧ್ಯಕ್ಷ ಶಶಿಧರ ತೆಕ್ಕೆಮೂಲೆ ಅಭಿನಂದಿಸಿದ್ದಾರೆ.

Post a Comment

0 Comments