Ticker

6/recent/ticker-posts

Ad Code

ಪುತ್ತಿಗೆ ಪಂ.ಅಧ್ಯಕ್ಷೆಯಾಗಿ ಫಿದಾ ಊಜಂಪದವು, ಉಪಾಧ್ಯಕ್ಷರಾಗಿ ಇ.ಕೆ.ಮುಹಮ್ಮದ್ ಕುಂಞ ಆಯ್ಕೆ

 

ಪುತ್ತಿಗೆ : ಸ್ಪಷ್ಟ ಬಹುಮತವಿಲ್ಲದ  ಪುತ್ತಿಗೆ ಗ್ರಾ. ಪಂ. ನಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯ  ಬೆಂಬಲದೊಂದಿಗೆ ಯುಡಿಎಫ್ ಪಂಚಾಯತ್ ಆಡಳಿತಕ್ಕೇರಿದೆ. ಯುಡಿಎಫ್ ನ ಯುವ ನಾಯಕಿ, 23ರ ಹರೆಯದ ಫಿದಾ ಊಜಂಪದವು ಎಂಟು ಸದಸ್ಯರ  ಬೆಂಬಲದೊಂದಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.ಈಕೆ ಕಾಸರಗೋಡು ಸರಕಾರಿ ಕಾಲೇಜಿನ ಇಂಗ್ಲೀಷ್ ಪದವಿಧರೆ. ಸೀತಾಂಗೋಳಿ ವಾರ್ಡಿನಿಂದ ಸ್ಪರ್ಧಿಸಿದ್ದ ಇ.ಕೆ‌.ಮುಹಮ್ಮದ್ ಕುಂಞಿ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಅನಂತಪುರ ವಾರ್ಡಿನಿಂದ ಬಿಜೆಪಿ ಪಕ್ಷದೊಳಗೆ ಬಂಡಾಯ ಎದ್ದು, ಪಕ್ಷೇತರನಾಗಿ ಸ್ಪರ್ಧಿಸಿ ಚುನಾಯಿತರಾದ ಸತೀಶ ಅವರು ಅಧ್ಯಕ್ಷರ ಆಯ್ಕೆಯ ಚುನಾವಣೆಯಲ್ಲಿ ಯುಡಿಎಫ್ ಬೆಂಬಲಿಸಿದ ಕಾರಣ ಪಂ. ಆಡಳಿತ ಯುಡಿಎಫ್ ಗೆ ಒಲಿದಿದೆ. ಎಡರಂಗಕ್ಕೆ ಏಳು ಸದಸ್ಯ ಬಲವಿದ್ದು, ಏಳು ಮತವಾದರೆ ಬಿಜೆಪಿಯ ಎರಡು ಮತ್ತು ಯುಡಿಎಫ್ ನ ಒಂದು ಮತ ನೋಟಕ್ಕೆ ಬಿದ್ದಿದೆ. ಈ ಹಿಂದೆ ಎಡರಂಗದ ಆಡಳಿತವಿದ್ದ ಪಂಚಾಯತ್ ಏಕಾಏಕಿ ಅತಂತ್ರ ಸ್ಥಿತಿಗೆ ತಲುಪಿ ಆಧಿಕಾರ ಕಳೆದುಕೊಂಡಿದ್ದು ಎಡ ಪಕ್ಷಗಳಿಗೆ ತಲೆ ನೋವಾಗಿ ಪರಿಣಾಮಿಸಿದೆ.

Post a Comment

0 Comments