Ticker

6/recent/ticker-posts

Ad Code

ಕಾಸರಗೋಡು ನಗರಸಭೆ ಅಧ್ಯಕ್ಷೆಯಾಗಿ ಶಾಹಿನಾ ಸಲೀಂ ಆಯ್ಕೆ

 


ಕಾಸರಗೋಡು: ಮುಸ್ಲಿಂ ಲೀಗ್‌ನ ನೇತಾರೆ ಶಾಹಿನಾ ಸಲೀಂ ಕಾಸರಗೋಡು ನಗರಸಭೆ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ. ತುರ್ತಿಯ 16ನೇ ವಾರ್ಡ್‌ನಿಂದ 215 ಮತಗಳ ಬಹುಮತದಿಂದ ಗೆಲ್ಲುವ ಮೂಲಕ ಶಾಹಿನಾ ನಗರ ಸಭೆ ಸದಸ್ಯರಾಗಿ ಚುನಾಯಿತರಾಗಿದ್ದರು. ಹಮೀದ್ ಬೆದಿರಾ ಅವರು ಶಾಹಿನಾ ಅವರನ್ನು ಅಧ್ಯಕ್ಷೆ ಸ್ಥಾನಕ್ಕೆ ಪ್ರಸ್ತಾಪಿಸಿದರು. ನೈಮುನ್ನೀಸಾ ಅವರನ್ನು ಬೆಂಬಲಿಸಿದರು. ಅಧ್ಯಕ್ಷೀಯ ಆಯ್ಕೆಯ ಚುನಾವಣೆಯಲ್ಲಿ ಬಿಜೆಪಿಯಿಂದ ಅಧ್ಯಕ್ಷೆ ಸ್ಥಾನಕ್ಕೆ ಶಾರದಾ ಸ್ಪರ್ಧಿಸಿದ್ದಾರೆ. ಶಾಹಿನಾ ಸಲೀಂ ಅವರು ಎಂಬಿಎ ಪದವಿ ಪಡೆದಿದ್ದು ಈ ಹಿಂದೆ ಚೆಂಗಳ ಪಂಚಾಯತ್ ಅಧ್ಯಕ್ಷರಾಗಿದ್ದರು. ಪ್ರಸ್ತುತ ವನಿತಾ ಲೀಗ್‌ನ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು.

Post a Comment

0 Comments