Ticker

6/recent/ticker-posts

Ad Code

ಪ್ರಪ್ರಥಮ ಬಾರಿಗೆ ಕೇರಳ ರಾಜಧಾನಿಯ ಮಹಾನಗರ ಪಾಲಿಕೆಗೆ ಬಿಜೆಪಿ ಮೇಯರ್‌ : ವಿ.ವಿ ರಾಜೇಶ್‌ ಆಯ್ಕೆ

ತಿರುವನಂತಪುರ: ಐತಿಹಾಸಿಕ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿ ರಾಜ್ಯ ಕಾರ್ಯದರ್ಶಿ ಹಾಗೂ ಕೊಡಂಗನೂರು ವಾರ್ಡ್‌ ಕೌನ್ಸಿಲರ್‌ ವಿ.ವಿ ರಾಜೇಶ್‌ ತಿರುವನಂತಪುರ ಮಹಾನಗರ ಪಾಲಿಕೆ ಮೇಯರ್‌  ಆಗಿ ಆಯ್ಕೆಯಾಗಿದ್ದಾರೆ. 51 ಮತಗಳನ್ನ ಗಳಿಸುವ ಮೂಲಕ ರಾಜೇಶ್‌ ಮೇಯರ್‌ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇತ್ತೀಚೆಗೆ ನಡೆದ ತಿರುವನಂತಪುರ‌ ಮಹಾ‌ನಗರ ಪಾಲಿಕೆ ಚುನಾವಣೆಯಲ್ಲಿ  45 ವರ್ಷಗಳ ಎಡರಂಗದ  ಆಡಳಿತಕ್ಕೆ ಅಂತ್ಯಹಾಡಿ ಎನ್‌ಡಿಎ ನೇತೃತ್ವದ ಬಿಜೆಪಿ ಗೆಲುವು ಸಾಧಿಸಿತ್ತು ತಿರುವನಂತಪುರದ 101 ವಾರ್ಡ್‌ಗಳ ಪೈಕಿ ಬಿಜೆಪಿ 50 ವಾರ್ಡ್‌ಗಳಲ್ಲಿ ಬಿಜೆಪಿ ಗೆದ್ದಿತ್ತು. ಇಂದು 101 ಸದಸ್ಯರ ಸಾಲಿನಲ್ಲಿ  ರಾಜೇಶ್ ವಿ.ವಿ. 50 ಬಿಜೆಪಿ ಕೌನ್ಸಿಲರ್‌ ಹಾಗೂ ಓರ್ವ ಸ್ವತಂತ್ರ ಸದಸ್ಯರ ಬೆಂಬಲ ಪಡೆಯುವ ಮೂಲಕ ಮೇಯರ್‌ ಪಟ್ಟಕ್ಕೇರಿದ್ದಾರೆ. ಇದು ಬಿಜೆಪಿ ಪಾಳಯಕ್ಕೆ ಸಂಭ್ರಮದ ದಿನವಾಗಿಸಿದೆ. ಯುಡಿಎಫ್  ಮೇಯರ್ ಅಭ್ಯರ್ಥಿ ಆಗಿದ್ದ ಕೆ.ಎಸ್ ಶಬರಿನಾಥನ್ 17 ಮತಗಳನ್ನು ಪಡೆದರು, ಎಲ್‌ಡಿಎಫ್ ಅಭ್ಯರ್ಥಿ ಆರ್‌ಪಿ ಶಿವಾಜಿ 29 ಮತಗಳನ್ನು ಗಳಿಸಿದ್ದಾರೆ. ಬಳಿಕ ಯುಡಿಎಫ್ ಪರ ಚಲಾವಣೆಗೊಂಡಿದ್ದ 2 ಮತಗಳನ್ನು  ಅಸಿಂಧು ಎಂದು ಘೋಷಿಸಲಾಯಿತು.

ಫಲಿತಾಂಶ ಘೋಷಣೆಯ ಬಳಿಕ ರಾಜೇಶ್ ರಾಜ್ಯ ರಾಜಧಾನಿಯ ಮೇಯರ್ ಆಗಿ ಪ್ರಮಾಣ ವಚನ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಕೇರಳ ರಾಜ್ಯ ಬಿಜೆಪಿ ಅಧ್ಯಕ್ಷ ರಾಜೀವ್ ಚಂದ್ರಶೇಖರ್, ಮಾಜಿ ಕೇಂದ್ರ ಸಚಿವ ವಿ. ಮುರಳೀಧರನ್, ಬಿಜೆಪಿಯ ಮಾಜಿ ರಾಜ್ಯ ಅಧ್ಯಕ್ಷ ಕೆ. ಸುರೇಂದ್ರನ್ ಸೇರಿದಂತೆ ಹಿರಿಯ ಬಿಜೆಪಿ ನಾಯಕರು ಹಾಜರಿದ್ದರು.

Post a Comment

0 Comments