ಪ್ರೀತಿ-ಪ್ರೇಮ ಅಂತ ಕೈ ಕೈ ಹಿಡಿದು ಸುತ್ತಾಡಿದ ಬಳಿಕ ಮದುವೆ ವಿಷಯ ಪ್ರಸ್ತಾಪಿಸಿದ ಯುವತಿಯನ್ನು ವಯಸ್ಸಿನ ಅಂತರ ಕಾರಣ ಹೇಳಿ ದೂರವಿರಿಸಿ ಕೊನೆಗೆ ಕಾಟ ತಡೆಯಲಾಗದಾಗ ಪ್ರಿಯಕರನೇ ಕತ್ತು ಸೀಳಿ ಭೀಕರವಾಗಿ ಹತ್ಯೆಗೈದ ಪ್ರಕರಣ ವರದಿಯಾಗಿದೆ. ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಗತಿಪುರದಲ್ಲಿದ್ದ ಯುವತಿ ಮನೆಯಲ್ಲಿ ಪ್ರಿಯಕರನೇ ಚಾಕುವಿನಿಂದ ಪ್ರಿಯತಮೆಯ ಕತ್ತು ಸೀಳಿ ಕೊಲೆ ಮಾಡಿದ್ದಾನೆ.
ಮಮತಾ ಕೊಲೆಯಾದ ಯುವತಿ. ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಕೆಲಸ ಮಾಡಿಕೊಂಡಿದ್ದ ಯುವತಿ ಅದೇ ಆಸ್ಪತ್ರೆಯಲ್ಲಿ ಕೆಲಸ ಮಾಡಿಕೊಂಡಿದ್ದ ಹಾಸನದ ಸುಧಾಕರ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಒಂದು ವರ್ಷಗಳ ಕಾಲ ಇಬ್ಬರು ಪ್ರೀತಿ ಪ್ರೇಮ ಅಂತ ಸುತ್ತಾಡುತ್ತಿದ್ದರು. ಈ ನಡುವೆ ಮಮತಳಿಗೆ ಗೊತ್ತಾಗದಂತೆ ಸುಧಾಕರ್ ಬೇರೊಂದು ಯುವತಿಯ ಜೊತೆ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದ. ವಿಚಾರ ಮಮತಾ ಕಿವಿಗೆ ಬಿದ್ದ ಬಳಿಕ ಈರ್ವರ ನಡುವೆ ಜಗಳಕ್ಕೆ ಕಾರಣವಾಗಿತ್ತು. ಮದುವೆ ಆಗದಿದ್ದರೆ ಮನೆಯವರ ಹೆಸರಿನಲ್ಲಿ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ತೀನಿ ಎಂದು ಮಮತ ಬೆದರಿಸಿದ್ದಾಳೆ. ಪ್ರೇಯಸಿ ನಡೆಯಿಂದ ಕುಪಿತಗೊಂಡ ಸುಧಾಕರ್ ಆಕೆಯನ್ನು ಕೊಲೆ ಮಾಡಿದ್ದಾನೆ.
ಕೊಲೆಯಾದಾಕೆಗೆ ವಯಸ್ಸು 39 ಹಾಗೂ ಕೊಲೆ ಆರೋಪಿಗೆ 25 ವರ್ಷ. ವಯಸ್ಸಿನ ಅಂತರ ಜಾಸ್ತಿ ಇದೆ ಎಂಬ ಕಾರಣಕ್ಕೆ ಆಕೆಯನ್ನು ಮದುವೆಯಾಗಲು ನಿರಾಕರಿಸಿದ್ದ ಎನ್ನಲಾಗುತ್ತಿದೆ. ಕುಮಾರಸ್ವಾಮಿ ಲೇಔಟ್ ಪೊಲೀಸರು ಆರೋಪಿ ಬಂಧಿಸಿ ತನಿಖೆಗೆ ಒಳಪಡಿಸಿದ್ದಾರೆ.

0 Comments