Ticker

6/recent/ticker-posts

Ad Code

ಕೌಟುಂಬಿಕ ಕಲಹ ಕಾರಣ : ಒಂದೇ ಮನೆಯ ನಾಲ್ವರು ಆತ್ಮಹತ್ಯೆ

 

ಕಣ್ಣೂರು: ಕೌಟುಂಬಿಕ ಕಲಹ ಕಾರಣ ಒಂದೇ ಮನೆಯ ನಾಲ್ವರು ಸಾವನ್ನಪ್ಪಿದ ಘಟನೆ ಪಯ್ಯನ್ನೂರಿನ ರಾಮಂತಳಿಯಲ್ಲಿ ನಡೆದಿದೆ. ಮನೆಯಲ್ಲಿದ್ದ ಅಮ್ಮ, ಮಗ ಮತ್ತು ಮೊಮ್ಮಕ್ಕಳು ಸೇರಿದಂತೆ ನಾಲ್ಕು ಮಂದಿಯ ಮೃತದೇಹ ಮನೆಯೊಳಗೆ ಪತ್ತೆಯಾಗಿದೆ. ಮೃತಪಟ್ಟವರು ವಡಕ್ಕುಂಪಡ್  ಬಳಿಯ ಕೊಯಿತ್ತಟ್ಟದ ಉಷಾ (56), ಅವರ ಮಗ ಕಲಾಧರನ್ (36) ಮತ್ತು ಕಲಾಧರನ್ ಅವರ ಮಕ್ಕಳಾದ ಹಿಮ (6) ಮತ್ತು ಕಣ್ಣನ್ (2) ಎಂದು ಗುರುತಿಸಲಾಗಿದೆ. ಕಲಾಧರನ್ ಮತ್ತು ಅವರ ತಾಯಿ ಮೊದಲು ಮಕ್ಕಳಿಗೆ ವಿಷ ನೀಡಿದ ಬಳಿಕ ನೇಣು ಬಿಗಿದುಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಕೋಣೆಯಲ್ಲಿ ಬಾಟಲಿಯಲ್ಲಿ ಕೀಟನಾಶಕ ಮತ್ತು ಹಾಲು ಪತ್ತೆಯಾಗಿದೆ. ಹಾಲನ್ನು ಕೀಟನಾಶಕದೊಂದಿಗೆ ಬೆರೆಸಿ ಮಕ್ಕಳಿಗೆ ನೀಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ.

ಕಲಾಧರನ್ ಮತ್ತು ಅವರ ಪತ್ನಿಯ ನಡುವೆ ಕೌಟುಂಬಿಕ ದೂರು  ನ್ಯಾಯಾಲಯದಲ್ಲಿ  ನಡೆಯುತ್ತಿರುವ ನಡುವೆ  ಕಲಾಧರನ್ ಅವರ ಇಬ್ಬರು ಮಕ್ಕಳನ್ನು ಅವರ ತಾಯಿಯೊಂದಿಗೆ ಬಿಡುವಂತೆ ಆದೇಶಿಸಿತ್ತು. ನಿನ್ನೆ ರಾತ್ರಿ ಕಲಾಧರನ್ ಗೆ ಅವರ ಪತ್ನಿ  ಕರೆ ಮಾಡಿ ಮಕ್ಕಳನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದರು ಎನ್ನಲಾಗಿದೆ. ಇದರ ಬಳಿಕ ನಾಲ್ವರು ಮೃತಪಟ್ಟಿರುವುದು ಕಂಡುಬಂದಿದೆ. ಪೊಲೀಸರು ಅಸ್ವಾಭಾವಿಕ ಸಾವಿನ ಪ್ರಕರಣವನ್ನು ದಾಖಲಿಸಿದ್ದಾರೆ. ಮನೆಯಲ್ಲಿ ಆತ್ಮಹತ್ಯೆ ಪತ್ರ ಪತ್ತೆಯಾಗಿದೆ. ಉಷಾ ಅವರ ಪತಿ, ಆಟೋ ಚಾಲಕ ಉನ್ನಿಕೃಷ್ಣನ್ ಮನೆಗೆ ತಲುಪಿದಾಗ, ಮನೆ ಬೀಗ ಹಾಕಲಾಗಿತ್ತು. ಉನ್ನಿಕೃಷ್ಣನ್ ಮನೆಯ ಮುಂದೆ ಬರೆದಿದ್ದ ಪತ್ರವನ್ನು ನೋಡಿ ಪೋಲಿಸ್ ಠಾಣೆಗೆ ಮಾಹಿತಿ ನೀಡಿದ್ದು ಪೊಲೀಸರು ಬಂದು ಮನೆ ತೆರೆದಾಗ, ಉಷಾ ಮತ್ತು ಕಲಾಧರನ್ ಮಲಗುವ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮತ್ತು ಅವರ ಮಕ್ಕಳು ನೆಲದ ಮೇಲೆ ಸತ್ತು ಬಿದ್ದಿರುವುದು ಕಂಡುಬಂದಿದೆ.

Post a Comment

0 Comments